Advertisement

Stock Market ಜಿಗಿತ: 72000 ಗಡಿ ದಾಟಿ ಸೆನ್ಸೆಕ್ಸ್‌- ನಿಫ್ಟಿಯೂ 21000 ದಾಖಲೆ

11:54 PM Dec 27, 2023 | Team Udayavani |

ಹೊಸದಿಲ್ಲಿ/ಮುಂಬಯಿ: ಇದೇ ಮೊದಲ ಬಾರಿಗೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್‌) 72 ಸಾವಿರ ಪಾಯಿಂಟ್ಸ್‌ ದಾಟಿ ದಾಖಲೆ ಬರೆ   ದಿದೆ. ಇದರ ಜತೆಗೆ ನಿಫ್ಟಿ ಸೂಚ್ಯಂಕ ಕೂಡ 21 ಸಾವಿರ ದಾಟಿ ಇತಿಹಾಸ ನಿರ್ಮಾಣ ಮಾಡಿದೆ. ಇದರಿಂದಾಗಿ ಬಿಎಸ್‌ಇನಲ್ಲಿರುವ ಹೂಡಿಕೆ ದಾರರು ನಾಲ್ಕು 11.11 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದರೆ, ಬುಧವಾರ ಒಂದೇ ದಿನ 2 ಲಕ್ಷ ಕೋಟಿ ರೂ. ಬಾಚಿಕೊಂಡಿದ್ದಾರೆ.

Advertisement

ಮಧ್ಯಂತರದಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 783.05 ಪಾಯಿಂಟ್ಸ್‌ ವರೆಗೆ ಏರಿಕೆಯಾಗಿ 72,119.85 ವರೆಗೆ ಸೆನ್ಸೆಕ್ಸ್‌ ಜಿಗಿಯಿತು. ದಿನಾಂತ್ಯಕ್ಕೆ ಅದು 72,038.43ರಲ್ಲಿ ಮುಕ್ತಾಯವಾಯಿತು. ಒಟ್ಟಾರೆಯಾಗಿ 701.63 ಪಾಯಿಂಟ್ಸ್‌ ಬುಧ ವಾರ ಏರಿಕೆಯಾಗಿದೆ. ಒಟ್ಟು ನಾಲ್ಕು ದಿನಗಳ ಅವಧಿಯಲ್ಲಿ (ಡಿ.21, ಡಿ.22) ಮಂಗಳವಾರ ಮತ್ತು ಬುಧವಾರದಂದು ಬಿಎಸ್‌ಇ ಸೂಚ್ಯಂಕ 1,532.12 ಪಾಯಿಂಟ್ಸ್‌ ಏರಿಕೆಯಾಗಿದೆ.

ಕಳೆದ ಹಲವು ತ್ತೈಮಾಸಿಕಗಳಿಂದ ದೇಶದ ಒಟ್ಟು ಅರ್ಥ ವ್ಯವಸ್ಥೆಯಲ್ಲಿ ಉಂಟಾಗಿರುವ ಧನಾತ್ಮಕ ಚಟುವಟಿಕೆಗಳಿಂದ ಈ ಏರಿಕೆ ಉಂಟಾ ಗಿದೆ ಎಂದು ಮಾರುಕಟ್ಟೆ ಕ್ಷೇತ್ರದ ತಜ್ಞರು ಹೇಳಿದ್ದಾರೆ. ಇದರಿಂದಾಗಿ ಬಿಎಸ್‌ಇ ಲಿಸ್ಟೆಡ್‌ ಕಂಪೆನಿಗಳ ಮೌಲ್ಯ 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 12 ದಿನಗಳ ಹಿಂದೆ ಬಿಎಸ್‌ಇ ಸೂಚ್ಯಂಕ 71 ಸಾವಿರಕ್ಕೆ ಏರಿಕೆ ಯಾದದ್ದು ಇದು ವರೆಗಿನ ದಾಖಲೆಯಾಗಿತ್ತು. ಇನ್ನು ನಿಫ್ಟಿ ಸೂಚ್ಯಂ ಕ ಕೂಡ 213.40 ಪಾಯಿಂ ಟ್ಸ್‌ ಏರಿಕೆಯಾಗಿ 21, 654.75ರಲ್ಲಿ ಮುಕ್ತಾಯವಾಗಿದೆ. ಮಧ್ಯಂ ತರದಲ್ಲಿ 234. 4 ಪಾಯಿಂ ಟ್ಸ್‌ ಏರಿಕೆಯಾಗಿ 21,675.75ರ ವರೆಗೆ ಜಿಗಿ ದಿತ್ತು. ಏಷ್ಯಾದ ಇತರ ಮಾರು ಕಟ್ಟೆಗಳಾದ ಸಿಯೋಲ್‌, ಟೋಕಿಯೋ, ಶಾಂಘೈ, ಹಾಂಕಾಂಗ್‌ ಮಾರುಕಟ್ಟೆ ಯಲ್ಲಿಯೂ ವಹಿವಾಟು ಉತ್ತಮ ವಾಗಿತ್ತು.

ರೂಪಾಯಿ ಕುಸಿತ: ಅಮೆರಿಕದ ಡಾಲರ್‌ ಎದುರು 16 ಪೈಸೆ ಕುಸಿತಗೊಂಡು 83.35 ರೂ.ಗೆ ದಿನ ವಹಿವಾಟು ಮುಕ್ತಾಯಗೊಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next