ಮುಂಬಯಿ: ಭಾರೀ ಏರಿಳಿಕೆ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಶುಕ್ರವಾರ (ಮೇ 06) ಭಾರೀ ಕುಸಿತ ಕಂಡ ಪರಿಣಾಮ ಕೇವಲ 15 ನಿಮಿಷದ ವಹಿವಾಟಿನಲ್ಲಿ ಹೂಡಿಕೆದಾರರು ಸುಮಾರು 5 ಲಕ್ಷ ಕೋಟಿ ರೂಪಾಯಿ ಕಳೆದುಕೊಳ್ಳುವಂತಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗೃಹ ಸಚಿವ ಶಾ ಪಶ್ಚಿಮಬಂಗಾಳ ಪ್ರವಾಸದ ವೇಳೆಯೇ ಬಿಜೆಪಿ ಕಾರ್ಯಕರ್ತನ ಶವ ಪತ್ತೆ
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿಯೇ 900ಕ್ಕೂ ಅಧಿಕ ಅಂಕಗಳು ಕುಸಿದಿದ್ದು, 54,801 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 266 ಅಂಕ ಇಳಿಕೆಯಾಗಿದ್ದು, 16,415 ಅಂಕಗಳಲ್ಲಿ ವಹಿವಾಟು ನಡೆದಿದೆ.
ಗುರುವಾರ ಬಿಎಸ್ ಇ ಮಾರುಕಟ್ಟೆ ಬಂಡವಾಳ 259.64 ಲಕ್ಷ ಕೋಟಿ ರೂಪಾಯಿ ಇದ್ದಿದ್ದು, ಇಂದು ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತ ಕಂಡ ಪರಿಣಾಮ ಮಾರುಕಟ್ಟೆ ಬಂಡವಾಳ 259.64 ಲಕ್ಷ ಕೋಟಿಯಿಂದ 254.52 ಲಕ್ಷ ಕೋಟಿಗೆ ಇಳಿಕೆಯಾಗುವ ಮೂಲಕ ಹೂಡಿಕೆದಾರರ 5.12 ಲಕ್ಷ ಕೋಟಿ ರೂಪಾಯಿ ಕೊಚ್ಚಿಕೊಂಡು ಹೋಗುವಂತಾಗಿದೆ.
ಶುಕ್ರವಾರದ ವಹಿವಾಟಿನಲ್ಲಿ 2,320 ಷೇರುಗಳು ಭಾರೀ ಕುಸಿತ ಕಂಡಿದ್ದು, 447 ಷೇರುಗಳು ಏರಿಕೆ ಕಂಡಿದ್ದು, ಇದರಲ್ಲಿ ಕೇವಲ 76 ಷೇರುಗಳ ಮೌಲ್ಯ ಯಥಾಸ್ಥಿತಿಯಲ್ಲಿದ್ದಿರುವುದಾಗಿ ಮಾರುಕಟ್ಟೆ ತಜ್ಞರ ವರದಿ ವಿವರಿಸಿದೆ.
ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಚ್ ಯುಎಲ್, ಮಾರುತಿ ಸುಜುಕಿ, ವಿಪ್ರೋ ಷೇರುಗಳು ಭಾರೀ ಪ್ರಮಾಣದ ಕುಸಿತ ಕಂಡಿದ್ದು, ಇದರಿಂದ ಹೂಡಿಕೆದಾರರು ಬೃಹತ್ ಮೊತ್ತದ ನಷ್ಟ ಅನುಭವಿಸುವಂತಾಗಿದೆ.