ಮುಂಬೈ: ನಾಲ್ಕನೇ ಹಂತದ ಲೋಕಸಭೆ ಚುನಾವಣೆಯ ಮತದಾನ ಮುಂದುವರೆದಿರುವ ನಡುವೆಯೇ ಸೋಮವಾರ (ಮೇ 13) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 750 ಅಂಕಗಳಷ್ಟು ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ನಷ್ಟವನ್ನುಂಟು ಮಾಡಿದೆ.
ಇದನ್ನೂ ಓದಿ:LS polls: ಮತ ಚಲಾಯಿಸಿದ ಟಾಲಿವುಡ್ ಸ್ಟಾರ್ಸ್; ಫೋಟೋಸ್ ವೈರಲ್
ಷೇರುಪೇಟೆ ಸಂವೇದಿ ಸೂಚ್ಯಂಕ 750 ಅಂಕ ಕುಸಿತ ಕಂಡಿದ್ದು, 72,000 ಸಾವಿರ ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 21,900 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆದಿದೆ.
ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್, ಮಾರುತಿ, ಎನ್ ಟಿಪಿಸಿ, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್ ಸೇರಿದಂತೆ ಪ್ರಮುಖ ಕಂಪನಿಯ ಷೇರುಗಳು ನಷ್ಟ ಕಂಡಿವೆ.
ಮತ್ತೊಂದೆಡೆ ಸನ್ ಫಾರ್ಮಾ, ಎಚ್ ಯುಎಲ್, ಕೋಟಕ್ ಬ್ಯಾಂಕ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಲಾಭಗಳಿಸಿವೆ. ಟಾಟಾ ಮೋಟಾರ್ಸ್ ಷೇರು ಬರೋಬ್ಬರಿ ಶೇ.6ರಷ್ಟು ಕುಸಿತ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚೀನಾದ ಬ್ಲೂ ಚಿಪ್ಸ್ ಬೆಲೆ ಭರ್ಜರಿ ಏರಿಕೆ ಕಂಡಿದೆ. ಜಪಾನ್ ಷೇರುಪೇಟೆಯ ಸೆನ್ಸೆಕ್ಸ್ ಇಳಿಕೆಯಾಗುವ ಮೂಲಕ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ.