Advertisement

Stock Market: ಹೂಡಿಕೆದಾರರಿಗೆ ಆಘಾತ: ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಸೂಚ್ಯಂಕ

01:20 AM Apr 18, 2023 | |

ಮುಂಬಯಿ: ಒಂಬತ್ತು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಬಾಂಬೆ ಷೇರು ಪೇಟೆಯ ಸೂಚ್ಯಂಕ ಸೋಮವಾರ ಭಾರೀ ಪ್ರಮಾಣದಲ್ಲಿ ಕುಸಿತ ಅನುಭವಿಸಿದೆ.

Advertisement

ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಹಿತ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳ, ತಂತ್ರಜ್ಞಾನ ಮತ್ತು ದೂರಸಂಪರ್ಕ ಕಂಪೆನಿಗಳ ಷೇರುಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಬಿಎಸ್‌ಇ ಸೂಚ್ಯಂಕ ಮಧ್ಯಂತರದಲ್ಲಿ 988.53 ಪಾಯಿಂಟ್ಸ್‌ ಇಳಿಕೆಯಾಗಿತ್ತು. ಆದರೆ ದಿನಾಂತ್ಯಕ್ಕೆ 520.25 ಪಾಯಿಂಟ್ಸ್‌ಗಳಿಗೆ ಮುಕ್ತಾಯವಾಗಿ, 59,910.75ರಲ್ಲಿ ಸೂಚ್ಯಂಕ ಮುಕ್ತಾಯವಾಯಿತು.

ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಮುನ್ಸೂಚನಾ ವರದಿ, ಉದ್ಯೋಗ ಕಡಿತಗೊಳಿಸುವ ಭೀತಿ, ಅಮೆರಿಕದ ಫೆಡರಲ್‌ ರಿಸರ್ವ್‌ ಮುಂದಿನ ದಿನಗಳಲ್ಲಿ ಬಡ್ಡಿದರ ಏರಿಕೆ ಮಾಡಲಿದೆ ಎಂಬ ಆತಂಕದಿಂದಾಗಿ ಬಿಎಸ್‌ಇ ಸೂಚ್ಯಂಕದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು ನಿಫ್ಟಿ ಸೂಚ್ಯಂಕ 121.15 ಪಾಯಿಂಟ್ಸ್‌ ಇಳಿಕೆಯಾಗಿ 17,706. 85ರಲ್ಲಿ ಮುಕ್ತಾಯವಾಯಿತು.

ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಬಿಎಸ್‌ಇ ಸೂಚ್ಯಂಕ ಇದೇ ಮೊದಲ ಬಾರಿಗೆ ಸತತ ಏರಿಕೆಯ ಬಳಿಕ ಪತನಗೊಂಡಿದೆ. ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ವಿಪ್ರೋ ಕಂಪೆನಿಗಳ ಷೇರುಗಳು ಇಳಿಮುಖಗೊಂಡಿದ್ದವು.

ಜಗತ್ತಿನಲ್ಲಿ: ಜಗತ್ತಿನ ಇತರ ಷೇರು ಪೇಟೆಗಳಲ್ಲಿ ವಹಿವಾಟು ಚೇತೋಹಾರಿಯಾಗಿ ಮುಂದುವರಿದಿತ್ತು. ಫ್ರಾನ್ಸ್‌ನಲ್ಲಿ ಶೇ.0.1, ಜರ್ಮನಿಯ ಡಿಎಎಕ್ಸ್‌ ಶೇ.0.2, ಜಪಾನ್‌ನ ನಿಕ್ಕಿ ಶೇ.0.1 ಸಹಿತ ಹಲವು ಷೇರುಪೇಟೆಗಳಲ್ಲಿ ತೃಪ್ತಿದಾಯಕ ವಹಿವಾಟು ಇತ್ತು.

Advertisement

ಶೇ.9 ಕುಸಿತ ಕಂಡ ಇನ್ಫೋಸಿಸ್‌ ಷೇರುಗಳು
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇನ್ಫೋಸಿಸ್‌ನ ಷೇರುಗಳು ಶೇ.9 ಕುಸಿತ ಕಂಡಿವೆ. 2019ರ ಬಳಿಕ ಇದೇ ಮೊದಲ ಬಾರಿಗೆ ದಿನ ವೊಂದರ ವಹಿವಾಟಿನಲ್ಲಿ ಕಂಪೆನಿಯ ಷೇರುಗಳು ಈ ಪ್ರಮಾಣದಲ್ಲಿ ಇಳಿಕೆಯಾಗಿವೆ. 2013ರಲ್ಲಿ ಕೂಡ ಕಂಪೆನಿಯ ಷೇರುಗಳು ಶೇ.21 ಕುಸಿತ ಕಂಡಿದ್ದವು. 2003ರಲ್ಲಿ ಕೂಡ ಷೇರುಗಳು ಇಳಿಕೆಯಾಗಿದ್ದವು. ಎನ್‌ಎಸ್‌ಇನಲ್ಲಿ ಶೇ.9.37 ಇಳಿಕೆಯಾಗಿದೆ. ಇದರಿಂದಾಗಿ ಕಂಪೆನಿಯ ಮಾರುಕಟ್ಟೆ ಮೌಲ್ಯ 59,329.66 ಕೋಟಿ ರೂ.ಗಳಷ್ಟು ಇಳಿಕೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next