ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ನೀರಸ ವಹಿವಾಟಿನ ಪರಿಣಾಮ ಗುರುವಾರ (ನವೆಂಬರ್ 17) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 230 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಸಿಎಂ ರಾಜೀನಾಮೆ ಕೇಳುವ ಕಾಂಗ್ರೆಸ್ ಮುಖಂಡರ ಬಾಲಿಶ, ಹುಡುಗಾಟಿಕೆಯ ವರ್ತನೆ: ಎನ್.ರವಿಕುಮಾರ್
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 230.12 ಅಂಕಗಳಷ್ಟು ಕುಸಿತದೊಂದಿಗೆ 61,750.60 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಷೇರುಪೇಟೆ ವಹಿವಾಟು ಆರಂಭಗೊಂಡ ಸಂದರ್ಭದಲ್ಲಿ 337.45 ಅಂಕಗಳಷ್ಟು ಇಳಿಕೆಯಾಗಿದ್ದು, 61,643.27 ಅಂಕಗಳಲ್ಲಿ ವಹಿವಾಟು ನಡೆದಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 65.75 ಅಂಕಗಳಷ್ಟು ಕುಸಿತದೊಂದಿಗೆ 18,343.90 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಸಂವೇದಿ ಸೂಚ್ಯಂಕ ಕುಸಿತದ ಪರಿಣಾಮ ಟೈಟಾನ್, ಮಹೀಂದ್ರ ಆ್ಯಂಡ್ ಮಹೀಂದ್ರ, ಮಾರುತಿ, ಎಚ್ ಡಿಎಫ್ ಸಿ, ಡಾ.ರೆಡ್ಡೀಸ್ ಲ್ಯಾಬೋರೇಟರಿ, ಬಜಾಜ್ ಫಿನ್ ಸರ್ವ್, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಎಲ್ ಆ್ಯಂಡ್ ಟಿ, ಪವರ್ ಗ್ರಿಡ್, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ಲಾಭಗಳಿಸಿದೆ. ಇನ್ನುಳಿದಂತೆ ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಷೇರು ಮಾರುಕಟ್ಟೆ ವಹಿವಾಟು ಕೂಡಾ ನೀರಸವಾಗಿತ್ತು ಎಂದು ವರದಿ ತಿಳಿಸಿದೆ.