ನವದೆಹಲಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟಿನ ಪರಿಣಾಮ ಮುಂಬಯಿ ಷೇರುಮಾರುಕಟ್ಟೆಯ ಸೋಮವಾರದ(ಮಾರ್ಚ್ 01, 2021) ಆರಂಭಿಕ ಹಂತದಲ್ಲಿ ಸಂವೇದಿ ಸೂಚ್ಯಂಕ 700 ಅಂಕ ಏರಿಕೆಯಾಗಿದ್ದು, ಎನ್ ಎಸ್ ಇ ನಿಫ್ಟಿ ದಾಖಲೆಯ 15,100 ಗಡಿ ತಲುಪಿದೆ.
ಇದನ್ನೂ ಓದಿ:ಕೋವಿಡ್ ಲಾಕ್ ಡೌನ್ ಆಘಾತದಿಂದ ಇನ್ನೂ ಚೇತರಿಕೆಯಾಗಿಲ್ಲ ಹೌಸ್ ಹೋಲ್ಡ್ ಇನ್ ಕಮ್ ..!
ಸೆನ್ಸೆಕ್ಸ್ ಸೂಚ್ಯಂಕ ಏರಿಕೆಯಿಂದ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಎಸ್ ಬಿಐ, ಆ್ಯಕ್ಸಿಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಒಎನ್ ಜಿಸಿ ಷೇರುಗಳು ಶೇ.7.57ರಷ್ಟು ಲಾಭ ಗಳಿಸಿವೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಿನ್ನಲೆಯಲ್ಲಿ ಮುಂಬಯಿ ಷೇರುಮಾರುಕಟ್ಟೆ ವಹಿವಾಟು ಚೇತರಿಕೆ ಕಂಡಿದ್ದು, ಹೂಡಿಕೆದಾರರಿಗೆ ಲಾಭ ತಂದಿದೆ. ಎನ್ ಎಸ್ ಇ ನಿಫ್ಟಿ ಕೂಡಾ ಏರಿಕೆಯಾಗಿದೆ.
ಬಾಂಡ್ ಗಳ ಮಾರುಕಟ್ಟೆಯಲ್ಲಿ ಅತ್ಯಧಿಕ ವಹಿವಾಟಿನಿಂದಾಗಿ ಶುಕ್ರವಾರ(ಫೆ.26) ಮುಂಬಯಿ ಷೇರುಮಾರುಕಟ್ಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ 1,900 ಅಂಕಗಳ ಕುಸಿತ ಕಂಡಿತ್ತು. ನಿಫ್ಟಿ ಕೂಡಾ 15 ಸಾವಿರಕ್ಕಿಂತ ಕೆಳಕ್ಕೆ ಇಳಿದಿತ್ತು.