ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ (ಜುಲೈ 13) ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಜಿಗಿತ ಕಂಡ ಪರಿಣಾಮ 66,007.38 ಅಂಕಗಳ ಗಡಿ ದಾಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಇದನ್ನೂ ಓದಿ:Vijay Deverakonda: “ನಾನು ಮದುವೆಯಾದಾಗ..” ಮ್ಯಾರೇಜ್ ಲೈಫ್ ಹೇಗಿರಬೇಕೆಂದ ನಟ ದೇವರಕೊಂಡ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 613.48 ಅಂಕಗಳಷ್ಟು ಏರಿಕೆಯೊಂದಿಗೆ 66007.38 ಅಂಕಗಳ ಗಡಿ ತಲುಪಿದೆ. ಅದೇ ರೀತಿ ನಿಫ್ಟಿ 168.15 ಅಂಕಗಳಷ್ಟು ಜಿಗಿತದೊಂದಿಗೆ 19,552.45 ಅಂಕಗಳ ಮಟ್ಟ ತಲುಪಿದೆ.
ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಏರಿಕೆಯಿಂದ ಟಾಟಾ ಸ್ಟೀಲ್, ಟಿಸಿಎಸ್, ಮಹೀಂದ್ರ & ಮಹೀಂದ್ರ, ರಿಲಯನ್ಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭಗಳಿಸಿವೆ.
ಸೆನ್ಸೆಕ್ಸ್ ಭಾರೀ ಜಿಗಿತ ಕಂಡರೂ ಈ ಷೇರುಗಳು ನಷ್ಟ ಕಂಡಿವೆ:
ಎಚ್ ಸಿಎಲ್ ಟೆಕ್, ಪವರ್ ಗ್ರಿಡ್, ಮಾರುತಿ ಸುಜುಕಿ, ನೆಸ್ಲೆ ಇಂಡಿಯಾ, Coal india ಲಿಮಿಟೆಡ್, ಯುಪಿಎಲ್, ಅಪೋಲೊ ಆಸ್ಪತ್ರೆ, ಸನ್ ಫಾರ್ಮಾ, ಡಾ.ರೆಡ್ಡೀಸ್, ಬಿಪಿಸಿಎಲ್, ಜೆಎಸ್ ಡಬ್ಲ್ಯು ಸ್ಟೀಲ್, Eicher ಮೋಟಾರ್ಸ್, ಏಷಿಯನ್ ಪೇಂಟ್ಸ್ ಷೇರುಗಳು ನಷ್ಟ ಕಂಡಿದೆ.