ಮುಂಬೈ: ಹಣಕಾಸು ನೀತಿಯ ಬಿಗು ಕ್ರಮ ಕೊನೆಗೊಳ್ಳುವ ಸಾಧ್ಯತೆ ಇದೆ ಎಂಬ ಅಮೆರಿಕದ ಫೆಡರಲ್ ರಿಸರ್ವ್ ಮುನ್ಸೂಚನೆಯ ಪರಿಣಾಮ ಗುರುವಾರ (ಡಿಸೆಂಬರ್ 14) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹೊಸ ದಾಖಲೆಯ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಇದನ್ನೂ ಓದಿ:ʼJigarthanda Double Xʼ ಸಿನಿಮಾ ನೋಡುತ್ತೇನೆ: ಹಾಲಿವುಡ್ ನಟ ಈಸ್ಟ್‌ವುಡ್ ಟ್ವೀಟ್ ವೈರಲ್
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 940.79 ಅಂಕ ಏರಿಕೆಯೊಂದಿಗೆ 70,525.39 ಅಂಕಗಳೊಂದಿಗೆ ಹೊಸ ದಾಖಲೆ ಏರಿಕೆಗೆ ಸಾಕ್ಷಿಯಾಯಿತು. ಅದೇ ರೀತಿ ನಿಫ್ಟಿ 255.40 ಅಂಕಗಳ ಏರಿಕೆಯಾಗಿದ್ದು, 21,181.70 ಅಂಕಗಳ ದಾಖಲೆಯ ವಹಿವಾಟು ನಡೆಸಿದೆ.
ಮಾಹಿತಿ ತಂತ್ರಜ್ಞಾನ ಸೆಕ್ಟರ್ ನ ಷೇರುಗಳ ಬೆಲೆ ಶೇ.3ರಷ್ಟು ಏರಿಕೆ ಕಂಡಿದೆ. ಅದರಲ್ಲಿ ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರಾ, ಎಲ್ ಟಿಐ ಮೈಂಡ್ ಟ್ರೀ, ಇನ್ಫೋಸಿಸ್ ಮತ್ತು ವಿಪ್ರೋ ಷೇರುಗಳ ಬೆಲೆ ಏರಿಕೆಯಾಗಿದೆ.
ಬುಧವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಅಲ್ಪ ಏರಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯ ಕಂಡಿತ್ತು.ಇಂಡಸ್ ಬ್ಯಾಂಕ್, ಕೋಟಕ್ ಮಹೀಂದ್ರ, ಹಿಂಡೊಲ್ಕೊ, ರಿಲಯನ್ಸ್, ಎಸ್ ಬಿಐ, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್ ಷೇರುಗಳ ಬೆಲೆ ಏರಿಕೆ ಕಂಡಿದೆ.