ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆ ಮೇಲಾಗಿದ್ದು, ಸೋಮವಾರದ (ಫೆ.22, 2021) ಆರಂಭಿಕ ವ್ಯವಹಾರದಲ್ಲಿ ಸಂವೇದಿ ಸೂಚ್ಯಂಕ 200ಕ್ಕೂ ಅಧಿಕ ಅಂಕಗಳಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್ 2
ಬಿಎಸ್ ಇ ಸಂವೇದಿ ಸೂಚ್ಯಂಕ 298.01 ಅಂಕಗಳ ಕುಸಿತದೊಂದಿಗೆ 50,591.75 ಅಂಕಗಳ ವಹಿವಾಟು ಆರಂಭಿಸಿದೆ. ಎನ್ ಎಸ್ ಇ ನಿಫ್ಟಿ 69 ಅಂಕಗಳ ಕುಸಿತದೊಂದಿಗೆ 14,912.80 ಅಂಕಗಳಷ್ಟು ಕೆಳಗಿಳಿದಿದೆ.
ಷೇರು ಮೌಲ್ಯ ಕುಸಿತದಿಂದಾಗಿ ಎಲ್ ಆ್ಯಂಡ್ ಟಿ, ಮಹೀಂದ್ರ ಆ್ಯಂಡ್ ಮಹೀಂದ್ರ, ಡಾ.ರೆಡ್ಡೀಸ್, ಮಾರುತಿ, ಎಚ್ ಡಿಎಫ್ ಸಿ, ಟಿಸಿಎಸ್ ಹಾಗೂ ಬಜಾಜ್ ಆಟೋ ಷೇರುಗಳು ನಷ್ಟ ಅನುಭವಿಸಿದೆ.
ಏತನ್ಮಧ್ಯೆ ಒಎನ್ ಜಿಸಿ, ಎಚ್ ಡಿಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರ ಮತ್ತು ಇನ್ಫೋಸಿಸ್ ಷೇರುಗಳು ಲಾಭ ಗಳಿಸಿವೆ. ಶುಕ್ರವಾರ(ಫೆ.19) ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 434.93 ಅಂಕಗಳಷ್ಟು ಕುಸಿತದೊಂದಿಗೆ 50,889.76 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು.