ಮುಂಬಯಿ:ಬಿರುಸಿನ ಷೇರು ಮಾರಾಟದ ಪರಿಣಾಮ ಶುಕ್ರವಾರ (ಜೂನ್ 10) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 849.66 ಅಂಕಗಳಷ್ಟು ಕುಸಿತದೊಂದಿಗೆ ಹೂಡಿಕೆದಾರರ ವಹಿವಾಟು ನಷ್ಟದಲ್ಲಿ ಮುಂದುವರಿದಿದೆ.
ಇದನ್ನೂ ಓದಿ:ಮುರುಡೇಶ್ವರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರು ಪಾಲು: ಮೂವರ ರಕ್ಷಣೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 849.66 ಅಂಕಗಳಷ್ಟು ಕುಸಿತದೊಂದಿಗೆ 54,456.49 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 209.75 ಅಂಕಗಳಷ್ಟು ಇಳಿಕೆಯೊಂದಿಗೆ 16,268.35 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಷೇರುಗಳ ಭಾರೀ ಮಾರಾಟದ ಒತ್ತಡದಲ್ಲಿ ಸೆನ್ಸೆಕ್ಸ್ ಕುಸಿತಗೊಂಡ ಪರಿಣಾಮ ಬೋಸ್ಟನ್ ಗ್ರೂಪ್, ವಿಪ್ರೋ, ಕೋಫ್ರೊಜ್, ಆದಿತ್ಯ ಬಿರ್ಲಾ ಫ್ಯಾಶನ್, ಕೋಟಕ್ ಮಹೀಂದ್ರ ಬ್ಯಾಂಕ್, ಟಾಟಾ ಸ್ಟೀಲ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಅದಾನಿ ಪೋರ್ಟ್ಸ್, ಎಲ್ ಆ್ಯಂಡ್ ಟಿ, ಕೋಲ್ ಇಂಡಿಯಾ, ಒಎನ್ ಜಿಸಿ, ಸಿಪ್ಲಾ ಷೇರುಗಳು ಭಾರೀ ನಷ್ಟ ಕಂಡಿದೆ.
ಮತ್ತೊಂದೆಡೆ ಏಷಿಯನ್ ಪೇಂಟ್ಸ್, ಪವರ್ ಗ್ರಿಡ್ ಕಾರ್ಪೋರೇಶನ್, ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ಆ್ಯಕ್ಸಿಸ್ ಬ್ಯಾಂಕ್, ಲುಪಿನ್ ಲಿಮಿಟೆಡ್ ಷೇರುಗಳು ಮುಖ್ಯವಾಗಿ ಲಾಭಗಳಿಸಿದೆ.
ಗುರುವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 427.79 ಅಂಕ ಏರಿಕೆಯೊಂದಿಗೆ 55,320.28 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿತ್ತು. ಮಧ್ಯಂತರ ವಹಿವಾಟಿನ ವೇಳೆ ಸೆನ್ಸೆಕ್ಸ್ 55,366.84 ಅಂಕಕ್ಕೆ ತಲುಪಿ, 54,507.41 ಅಂಕಕ್ಕೆ ಇಳಿಕೆಯಾಗಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 121.85 ಅಂಕ ಏರಿಕೆಯೊಂದಿಗೆ 16,478.10 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು.