ಮುಂಬೈ: ಎಲ್ & ಟಿ, ಐಸಿಐಸಿಐ ಬ್ಯಾಂಕ್ ನ ಹೆವಿ ವ್ಹೇಟ್ ಷೇರುಗಳ ಮಾರಾಟದ ಭರಾಟೆಯ ಪರಿಣಾಮ ಶುಕ್ರವಾರ (ಮೇ 03) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾದಂತಾಗಿದೆ.
ಇದನ್ನೂ ಓದಿ:Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 935 ಅಂಕಗಳಷ್ಟು ಕುಸಿತ ಕಂಡಿದ್ದು, 75,095.18 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 245 ಅಂಕಗಳಷ್ಟು ಇಳಿಕೆಯಾಗಿದ್ದು, 22,794.70 ಅಂಕಗಳ ಗಡಿ ತಲುಪಿತ್ತು.
11-45ರ ವಹಿವಾಟಿನ ಹೊತ್ತಿಗೆ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 590 ಅಂಕ ಇಳಿಕೆಯಾಗಿದ್ದು, 74,020.78 ಅಂಕಗಳಲ್ಲಿ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ 158 ಅಂಕಗಳಷ್ಟು ಇಳಿಕೆಯಾಗಿದ್ದು, 22,490ರ ಗಡಿ ತಲುಪಿದೆ.
ಜಾಗತಿಕ ಮಟ್ಟದಲ್ಲಿ ಜಪಾನ್ ಮತ್ತು ಚೀನಾದ ಷೇರುಪೇಟೆ ಶುಕ್ರವಾರ ಬಂದ್ ಆಗಿದ್ದು, ಹೂಡಿಕೆದಾರರು ಅಮೆರಿಕ ಷೇರುಪೇಟೆ ವಹಿವಾಟಿನತ್ತ ಚಿತ್ತ ನೆಟ್ಟಿದ್ದಾರೆ. ಇನ್ನುಳಿದಂತೆ ಹಾಂಗ್ ಕಾಂಗ್, ಯುರೋಪ್ ಷೇರುಪೇಟೆ ಸೆನ್ಸೆಕ್ಸ್ ಜಿಗಿತ ಕಂಡಿರುವುದಾಗಿ ಷೇರುಪೇಟೆ ವರದಿ ತಿಳಿಸಿದೆ.