Advertisement

2 ಸಾವಿರ ಅಂಕ ಪತನ ; ಅಮೆರಿಕ-ಚೀನಾ ವಾಕ್ಸಮರಕ್ಕೆ ಷೇರುಪೇಟೆ ತತ್ತರ

01:54 AM May 05, 2020 | Hari Prasad |

ಮುಂಬಯಿ: ಕೋವಿಡ್ ವೈರಸ್‌ಗೆ ಸಂಬಂಧಿಸಿ ಅಮೆರಿಕ ಮತ್ತು ಚೀನಾ ನಡುವಿನ ವಾಕ್ಸಮರವು ಮತ್ತೂಂದು ಸುತ್ತಿನ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡುವುದೇ ಎಂಬ ಭೀತಿ ಹಾಗೂ ರಾಷ್ಟ್ರವ್ಯಾಪಿ ದಿಗ್ಬಂಧನ ಮತ್ತಷ್ಟು ವಿಸ್ತರಣೆ ಆಗಿರುವುದು ಷೇರು ಪೇಟೆಯ ಹೂಡಿಕೆದಾರರನ್ನು ಆಘಾತಕ್ಕೆ ತಳ್ಳಿದೆ.

Advertisement

ಇದರ ಪರಿಣಾಮವೆಂಬಂತೆ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ ದಾಖಲೆಯ 2002 ಅಂಕಗಳ ಪತನ ಕಂಡಿದೆ. ತಿಂಗಳ ಬಳಿಕ ಈ ಮಟ್ಟದ ಇಳಿಕೆ ಕಂಡಿರುವ ಸೆನ್ಸೆಕ್ಸ್‌, ದಿನಾಂತ್ಯಕ್ಕೆ 2002 ಅಂಕ ಇಳಿಕೆ (ಶೇ.5.94) ದಾಖಲಿಸಿ, 31,715ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ಹೂಡಿಕೆದಾರರು ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿಕೊಂಡ ಕಾರಣ, ನಿಫ್ಟಿ ಕೂಡ 566 ಅಂಕ ಕುಸಿದು, 9,293ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಸೋಮವಾರದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕು ಅತಿಹೆಚ್ಚು ನಷ್ಟ ಅನುಭವಿಸಿದ್ದು, ಇದರ ಷೇರುಗಳು ಶೇ.10ರಷ್ಟು ಕುಸಿತ ಅನುಭವಿಸಿವೆ.

ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್ಸಿ, ಇಂಡಸ್‌ ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಮಾರುತಿ ಕಂಪನಿ ಷೇರು ಗಳು ಕೂಡ ನಷ್ಟ ಕಂಡಿವೆ. ಕೇವಲ ಭಾರ್ತಿ ಏರ್‌ ಟೆಲ್‌ ಮತ್ತು ಸನ್‌ ಫಾರ್ಮಾ ಮಾತ್ರವೇ ಸೋಮವಾರ ಲಾಭ ಕಂಡ ಕಂಪನಿಗಳು.

Advertisement

Udayavani is now on Telegram. Click here to join our channel and stay updated with the latest news.

Next