Advertisement

ಬಾಂಬೆ ಷೇರು ಪೇಟೆ ಸೆನ್ಸೆಕ್ಸ್ 100ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿ ಇಳಿಕೆ

02:28 PM Oct 25, 2021 | Team Udayavani |

ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ(ಅಕ್ಟೋಬರ್ 25) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ. ಇದರಿಂದಾಗಿ ಇನ್ಫೋಸಿಸ್, ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಕಾಣುವಂತಾಗಿದೆ.

Advertisement

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 114.93 ಅಂಕ ಇಳಿಕೆಯಾಗಿದ್ದು, 60,706.69 ಅಂಕಗಳಲ್ಲಿ ಆರಂಭಿಕ ವಹಿವಾಟು ನಡೆದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 58.55 ಅಂಕ ಕುಸಿತ ಕಂಡಿದ್ದು, 18,056.35 ಅಂಕಗಳಲ್ಲಿ ವಹಿವಾಟು ನಡೆಸಿದೆ.

ಸೆನ್ಸೆಕ್ಸ್, ನಿಫ್ಟಿ ಕುಸಿತದ ಪರಿಣಾಮ ಏಷ್ಯನ್ ಪೇಂಟ್ಸ್, ಇಂಡಸ್ ಇಂಡ್ ಬ್ಯಾಂಕ್, ಎಚ್ ಸಿಎಲ್ ಟೆಕ್, ಭಾರ್ತಿ ಏರ್ ಟೆಲ್, ಕೋಟಕ್ ಬ್ಯಾಂಕ್ ಮತ್ತು ಬಜಾಜ್ ಆಟೋ ಷೇರುಗಳು ನಷ್ಟ ಕಂಡಿವೆ. ಮತ್ತೊಂದೆಡೆ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಮಹಿಂದ್ರ ಆ್ಯಂಡ್ ಮಹೀಂದ್ರ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿದೆ.

ಬಾಂಬೆ ಷೇರುಪೇಟೆಯ ಹಿಂದಿನ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 101.88 ಅಂಕಗಳಷ್ಟು ಕುಸಿತ ಕಂಡಿದ್ದು, 60, 821.62 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ನಿಫ್ಟಿ ಕೂಡಾ 63.20 ಅಂಕ ಕುಸಿತ ಕಂಡಿದ್ದು, 18,114.90 ಅಂಕಗಳ ಗಡಿ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next