ಮುಂಬಯಿ:ಐಟಿ ಕಂಪನಿಗಳ ತ್ರೈಮಾಸಿಕ ವರದಿಯ ಘೋಷಣೆಯ ಮೇಲಿನ ಭರವಸೆ ಹಿನ್ನೆಲೆಯಲ್ಲಿ ಬುಧವಾರ( ಜನವರಿ 12) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕಗಳಷ್ಟು ಏರಿಕೆ ಕಾಣುವ ಮೂಲಕ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಉತ್ತರಪ್ರದೇಶ ಆಡಳಿತಾರೂಢ ಬಿಜೆಪಿಗೆ ಮತ್ತೊಂದು ಆಘಾತ; ಸಚಿವ ದಾರಾ ಸಿಂಗ್ ರಾಜೀನಾಮೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 533.15 ಅಂಕಗಳಷ್ಟು ಏರಿಕೆಯೊಂದಿಗೆ 61,150.04 ಅಂಕಗಳ ದಾಖಲೆ ಪ್ರಮಾಣದ ವಹಿವಾಟಿನೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಮಧ್ಯಂತರ ಷೇರು ವಹಿವಾಟಿನಲ್ಲಿ ಸೆನ್ಸೆಕ್ಸ್ 61,218.19 ಅಂಕಗಳಿಗೆ ತಲುಪಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ 156.60 ಅಂಕಗಳಷ್ಟು ಏರಿಕೆಯಾಗಿದ್ದು, 18,212.35ರ ಗಡಿ ದಾಟಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಏರ್ ಟೆಲ್, ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿದೆ.
ಮತ್ತೊಂದೆಡೆ ಟಿಸಿಎಸ್, ಟೈಟಾನ್, ಎಚ್ ಡಿಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರ, ವಿಪ್ರೋ ಮತ್ತು ನೆಸ್ಲೆ ಷೇರುಗಳು ನಷ್ಟ ಕಂಡಿದೆ. ಅಮೆರಿಕದ ಷೇರುಮಾರುಕಟ್ಟೆ ಸೆನ್ಸೆಕ್ಸ್ ಜಿಗಿತ ಕಂಡಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಒಂದು ಪೈಸೆಯಷ್ಟು ಏರಿಕೆ ಕಂಡಿದೆ.