Advertisement

ಬಸ್‌ ನಿಲ್ದಾಣದಲ್ಲಿ ದುರ್ನಾತ:ಪ್ರಯಾಣಿಕರಿಗೆ ನಿತ್ಯ ನರಕ

04:06 PM Dec 03, 2022 | Team Udayavani |

ಆಲೂರು: ಸಾಂಕ್ರಾಮಿಕ ರೋಗ ತಡೆಯುವ ಸಲುವಾಗಿ ಸ್ವತ್ಛತೆ ಕಾಪಾಡಿ ಎಂದು ಗಂಟೆಗಟ್ಟಲೇ ಭಾಷಣ ಮಾ ಡುವ ಅಧಿಕಾರಿಗಳು, ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ಕಸದ ರಾಶಿ ಬಿದ್ದಿದ್ದರೂ ತೆರವು ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.

Advertisement

ಇದನ್ನು ನೋಡಿದ್ರೆ, ಪಟ್ಟಣದ ಜನರ ಆರೋಗ್ಯವನ್ನು ಹೇಗೆ ಕಾಪಾಡುತ್ತಾರೆ ಎಂಬುದು ಗೊತ್ತಾಗುತ್ತದೆ. ಆಲೂರು ಪಟ್ಟಣದ ಬಸ್‌ ನಿಲ್ದಾಣದಲ್ಲಿನ ಶೌಚಾಲಯ ಕಟ್ಟಿಕೊಂಡು ದುರ್ನಾತ ಬಿರುತ್ತದೆ. ಪಿಟ್‌ ಗುಂಡಿ ತುಂಬಿ ಕೊಂಡು ಮಲ, ಮೂತ್ರ ಒಳಗೊಂಡ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಪ್ರಯಾಣಿಕರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ. ಕರಾವಳಿ, ಮಲೆನಾಡು ಭಾಗದ ವಿವಿಧ ಯಾತ್ರಾ ಸ್ಥಳಗಳಿಗೆ ತೆರಳಲು ಸಾವಿರಾರು ಮಂದಿ ಜನರು ಇಲ್ಲಿಗೆ ಬರುತ್ತಾರೆ. ಬಸ್‌ ನಿಲ್ದಾಣದ ಬಳಿಯಿರುವ ಶೌಚಾಲಯ ಪಿಟ್‌ ಗುಂಡಿ ತುಂಬಿ ಮುಚ್ಚಳ ತೆರೆದುಕೊಂಡಿದ್ದು, ದುರ್ವಾಸನೆ ತಡೆಯಲಾಗುತ್ತಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ: ಶೌಚಾಲಯದ ಸುತ್ತಮುತ್ತ ಪಾಚಿ ಕಟ್ಟಿ, ಸೊಳ್ಳೆಗಳ ಉತ್ಪಾದನಾ ಸ್ಥಳವಾಗಿ ಮಾರ್ಪ ಟ್ಟಿದೆ. ಸಾಂಕ್ರಾಮಿಕ ರೋಗ ಹರಡುವ ಅವಾಸನ ಕೇಂದ್ರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕಾಣದೇ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರಯಾಣಿಕರಿಗೆ ಕಿರಿಕಿರಿ: ಬಸ್‌ ನಿಲ್ದಾಣ ಸುತ್ತ ಮುತ್ತ ಎಲ್ಲೆಂದರಲ್ಲಿ ನೀರಿನ ಬಾಟಲ್‌, ತಂಬಾಕು ತಿಂದು ಎಸೆದ ಪ್ಲಾಸ್ಟಿಕ್‌ ಕವರ್‌ಗಳು, ಗುಟುಕಾ ಪಾಕೇಟ್‌, ಮದ್ಯದ ಬಾಟಲ್‌ಗ‌ಳು ಸೇರಿ ಕಸದ ರಾಶಿ ಬಿದ್ದಿದ್ದರೂ ಅದನ್ನು ಸ್ವತ್ಛಗೊಳಿಸುವ ಕಾರ್ಯ ಮಾಡಿಲ್ಲ. ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ.

ಅನುದಾನ ಪಡೆದರೂ ಶುಚಿತ್ವ ಇಲ್ಲ: ಪಕ್ಕದಲ್ಲಿ ತಾಲೂಕು ಕಚೇರಿ, ಪೊಲೀಸ್‌ ಠಾಣೆ, ಬಸ್‌ ನಿಲ್ದಾಣದ ಸುತ್ತಮುತ್ತ ವಾಸದ ಮನೆಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವತ್ಛತೆಗಾಗಿ ಪಪಂಗೆ ಲಕ್ಷಾಂತರ ರೂ. ಅನುದಾನ ನೀಡುತ್ತದೆ. ಆದರೆ, ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ. ಪ್ರಯಾಣಿಕರ ಹಿತ ಕಾಯಬೇಕಾದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

Advertisement

ಇಂತಹ ಅಧಿಕಾರಿಗಳ ವಿರುದ್ಧ ಸಂಸ್ಥೆ ಸೂಕ್ತ ಕ್ರಮಕೈಗೊಳ್ಳುವುದರ ಜೊತೆಗೆ ಸಾರ್ವಜನಿಕರ ಆರೋಗ್ಯ ರಕ್ಷಣೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ಪಟ್ಟಣ ಬಸ್‌ ನಿಲ್ದಾಣದಲ್ಲಿರುವ ಶೌಚಾಲಯ ಪಿಟ್‌ ಗುಂಡಿ ತುಂಬಿ ಮಲ, ಮೂತ್ರ ಒಳಗೊಂಡ ನೀರು ಚರಂಡಿ ಯಲ್ಲಿ ಹರಿಯುತ್ತಿರುವುದ ರಿಂದ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಲ್ದಾಣ ಪಕ್ಕದ ಮನೆಯ ನಿವಾಸಿ ಗಳು ದುರ್ನಾತದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಇತ್ತ ಗಮನಹರಿಸಬೇಕು. -ರಾಘವೇಂದ್ರ, ತಾಲೂಕು ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ).

– ಕುಮಾರಸ್ವಾಮಿ, ಟಿ.ತಿಮ್ಮನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next