Advertisement

ಉತ್ತರ ಕೊರಿಯ ನಿರಸ್ತ್ರೀಕರಣ ಬೇಗನೆ ಆಗಬೇಕಿದೆ: ಪಾಂಪಿಯೋ

05:07 PM Jun 14, 2018 | Team Udayavani |

ಬೀಜಿಂಗ್‌ : ಐತಿಹಾಸಿಕ ಶೃಂಗದ ಒಪ್ಪಂದದ ಪ್ರಕಾರ ಉತ್ತರ ಕೊರಿಯದ ಪರಮಾಣು ನಿರಸ್ತ್ರೀಕರಣ ನಡೆಯದೇ ಹೋದಲ್ಲಿ  ಜಾಗತಿಕ ಪರಮಾಣು ಅಪಾಯ ಹಾಗೆಯೇ ಉಳಿಯಲಿದೆ ಎಂದು ಅಮೆರಿಕದ ವಿದೇಶ ಸಚಿವ ಮೈಕ್‌ ಪಾಂಪಿಯೋ ಹೇಳಿದ್ದಾರೆ.

Advertisement

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯ ನಾಯಕ ಕಿಮ್‌ ಜಾಂಗ್‌ ಉನ್‌ ಅವರೊಳಗಿನ ಐತಿಹಾಸಿಕ ಶೃಂಗದ ಫ‌ಲಶ್ರುತಿಯ ವಿವರಗಳನ್ನು ಚೀನದ ವಿದೇಶ ಸಚಿವ ವಾಂಗ್‌ ಯೀ ಅವರಿಗೆ ನೀಡುವ ಸಂದರ್ಭದಲ್ಲಿ ಪಾಂಪಿಯೋ ಈ ಮಾತನ್ನು ಎಚ್ಚರಿಕೆಯ ರೂಪದಲ್ಲಿ ಹೇಳಿದರು. 

ಐತಿಹಾಸಿಕ ಶೃಂಗದ ಒಪ್ಪಂದದಂತೆ ಉತ್ತರ ಕೊರಿಯದ ಪರಮಾಣು ನಿರಸ್ತ್ರೀಕರಣ ನಡೆಯಬೇಕಿದೆ ಮತ್ತು ಅದು ಆದಷ್ಟು ಬೇಗನೆ ಆಗಬೇಕಿದೆ. ಒಂದೊಮ್ಮೆ ಅದು ಸಾಧಿತವಾಗದಿದ್ದಲ್ಲಿ  ಜಾಗತಿಕ ಪರಮಾಣು ಅಪಾಯಗಳು ಹಾಗೆಯೇ ಉಳಿಯಲಿವೆ ಎಂದು ಪಾಂಪಿಯೋ ಸ್ಪಷ್ಟವಾಗಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next