Advertisement

ಹವಾಮಾನ ವೈಪರೀತ್ಯ: ವಿಶ್ವಸಂಸ್ಥೆ ಕಳವಳ

11:33 AM Dec 04, 2018 | Karthik A |

ಕಟೋವಿಸ್‌ (ಪೋಲೆಂಡ್‌): ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಜಿಸಲಾಗಿದ್ದ ಕಾರ್ಯಸೂಚಿ ಪಾಲಿಸುವಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳೂ ವಿಫ‌ಲವಾಗಿವೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಜಾಗತಿಕ ತಾಪಮಾನ ಹೆಚ್ಚಳವನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಪೋಲೆಂಡ್‌ನ‌ಲ್ಲಿ ಆಯೋಜಿಸಲಾಗಿರುವ ಸರ್ವದೇಶಗಳ ಮಹಾಸಭೆಯಾದ ‘ಕೋಪ್‌ 24’ನಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್‌, ಹವಾಮಾನ ವೈಪರೀತ್ಯ ತಡೆಗಟ್ಟುವಲ್ಲಿ ವಿಫ‌ಲವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದರಲ್ಲದೆ, ಪ್ರಕೃತಿಯನ್ನು ಕಾಪಾಡಲು ನಾವು ಮಾಡುತ್ತಿರುವ ಪ್ರಯತ್ನಗಳು ಪ್ರಯೋಜನಕ್ಕಿಲ್ಲ. ತುರ್ತಾಗಿ ಆಗಬೇಕಿರುವ ಈ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎಂದು ವಿಷಾದಿಸಿದರು. 

Advertisement

ಮುಂಬರುವ ದಶಕದೊಳಗೆ ಜಾಗತಿಕ ತಾಪಮಾನ ಹೆಚ್ಚಳ, ಹಸಿರುಮನೆ ಪರಿಣಾಮ ನಿಯಂತ್ರಣಕ್ಕೆ ತರದಿದ್ದರೆ ಮನುಕುಲವು ಭೀಕರ ತೊಂದರೆಗಳಿಗೆ ತುತ್ತಾಗಲಿದೆ ಎಂದು ವೈಜ್ಞಾನಿಕ ವರದಿಗಳು ಈಗಾಗಲೇ ಎಚ್ಚರಿಕೆ ನೀಡಿವೆ. ಆದರೂ ನಾವು ಆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ಇದೇ ವೇಳೆ, ಕಲ್ಲಿದ್ದಲು ವಿದ್ಯುದಾಗಾರಗಳನ್ನು ಅಪಾರ ಪ್ರಮಾಣದಲ್ಲಿ ಹೊಂದುವ ಮೂಲಕ ಪರಿಸರಕ್ಕೆ ಹಾನಿ ಮಾಡುತ್ತಿರುವ ಪೋಲೆಂಡ್‌ನ‌ಲ್ಲೇ ಈ ಸಮ್ಮೇಳನ ನಡೆಸುತ್ತಿರುವುದನ್ನು ಅನೇಕರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next