ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡದ ಪಾಲಾಗದೆ, ಅನ್ ಸೋಲ್ಡ್ ಆಗಿದ್ದ ಆಸೀಸ್ ದಿಗ್ಗಜ ಐಪಿಎಲ್ ಗೆ ಬರುತ್ತಿದ್ದಾರೆ. ಹೌದು ಈ ಬಗ್ಗೆ ಸ್ವತಃ ಸ್ಟೀವ್ ಸ್ಮಿತ್ ಅವರು ಹೇಳಿಕೊಂಡಿದ್ದಾರೆ.
ಸ್ಟೀವ್ ಸ್ಮಿತ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2023) ಮುಂಬರುವ ಆವೃತ್ತಿಯ ಭಾಗವಾಗುವುದಾಗಿ ಮಾರ್ಚ್ 27 ರಂದು ಸೋಮವಾರ ಘೋಷಿಸಿದರು. ಆದರೆ ಅವರು ಯಾವ ರೂಪದಲ್ಲಿ ಟಿ20 ಟೂರ್ನಿಗೆ ಸೇರುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ:’20 ವರ್ಷಗಳ ಹಿಂದೆ ನನಗೆ ಅರಿವಿರಲಿಲ್ಲ…’; ಮರು ಮದುವೆ ಬಗ್ಗೆ ಮಾತನಾಡಿದ ಶಿಖರ್ ಧವನ್
ಸ್ಮಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು, “ನಮಸ್ತೆ ಭಾರತ. ನಾನು ನಿಮಗಾಗಿ ಕೆಲವು ರೋಚಕ ಸುದ್ದಿಗಳನ್ನು ಹೊಂದಿದ್ದೇನೆ. ನಾನು 2023ರ ಐಪಿಎಲ್ ಗೆ ಸೇರುತ್ತಿದ್ದೇನೆ. ಹೌದು, ನಾನು ಭಾರತದಲ್ಲಿ ಅಸಾಧಾರಣ ತಂಡವೊಂದನ್ನು ಸೇರುತ್ತಿದ್ದೇನೆ” ಎಂದಿದ್ದಾರೆ.
ಸ್ಟೀವ್ ಸ್ಮಿತ್ ಅವರು ಯಾವ ರೂಪದಲ್ಲಿ ಐಪಿಎಲ್ ನ ಭಾಗವಾಗಿರಲಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸ್ಮಿತ್ ಕಮೆಂಟೇಟರ್ ಆಗಿ ಬರಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ ಐಪಿಎಲ್ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿ ಸ್ಮಿತ್ ಹೆಸರು ಕಂಡುಬಂದಿಲ್ಲ.
ಸ್ಮಿತ್ ಇದುವರೆಗೆ ಆರು ಐಪಿಎಲ್ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಪುಣೆ ವಾರಿಯರ್ಸ್ ಇಂಡಿಯಾ, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಅವರು ಆಡಿದ್ದಾರೆ.