Advertisement
ಈಗ ಬಕ್ನರ್ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭ ದಲ್ಲಿ ತಮ್ಮ ವೃತ್ತಿ ಬದುಕನ್ನು ಅವ ಲೋಕಿಸಿದ ಅವರು, ತೆಂಡುಲ್ಕರ್ ವಿರುದ್ಧ ತಾನೆರಡು ತಪ್ಪು ತೀರ್ಪು ನೀಡಿದ್ದಾಗಿ ಒಪ್ಪಿ ಕೊಂಡಿದ್ದಾರೆ.
“ಸಚಿನ್‌ಗೆ ಎರಡು ಸಂದರ್ಭ ಗಳಲ್ಲಿ ನೀಡಿದ ಔಟ್ ತೀರ್ಪುಗಳು ನನ್ನ ತಪ್ಪಿನಿಂದ ಸಂಭವಿಸಿದ್ದಾಗಿದೆ. ಯಾವುದೇ ಅಂಪಾಯರ್ ತಪ್ಪು ತೀರ್ಪು ನೀಡಲು ಮುಂದಾಗು ವುದಿಲ್ಲ. ಇದ ರಿಂದ ವೃತ್ತಿಬದುಕನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಬಯ ಸುವುದಿಲ್ಲ…’ ಎಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಸ್ಟೀವ್ ಬಕ್ನರ್ ಹೇಳಿದರು. “ನಾವು ಕೂಡ ಮನುಷ್ಯರೇ. ನಮ್ಮಿಂದಲೂ ತಪ್ಪುಗಳಾಗುತ್ತವೆ. ಆದರೆ ಇದು ಉದ್ದೇಶಪೂರ್ವಕ ಅಲ್ಲ. ಅದರಲ್ಲೂ ಕೆಲವೇ ಸೆಕೆಂಡ್‌ಗಳಲ್ಲಿ ತೀರ್ಮಾನಕ್ಕೆ ಬರಬೇಕಾದ ಸಂದರ್ಭದಲ್ಲಿ ನಾವು ಎಡವಿ ಬೀಳುವುದು ಸಹಜ. ತೆಂಡುಲ್ಕರ್ ವಿರುದ್ಧವೂ ಹೀಗೆಯೇ ಆಗಿತ್ತು’ ಎಂದರು.
Related Articles
ತೆಂಡುಲ್ಕರ್ ವಿರುದ್ಧ ಬಕ್ನರ್ ನೀಡಿದ ಮೊದಲ ತಪ್ಪು ತೀರ್ಪಿಗೆ ಸಾಕ್ಷಿಯಾಗಿರುವುದು 2003ರ ಆಸ್ಟ್ರೇಲಿಯ ಎದುರಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯ. ಅಂದು ಜಾಸನ್ ಗಿಲೆಸ್ಪಿ ಎಸೆತವೊಂದರಲ್ಲಿ ಸಚಿನ್ ಲೆಗ್ ಬಿಫೋರ್ ಆಗಿದ್ದರು. ಆಗ ಚೆಂಡು ಸ್ಟಂಪ್‌ಗಿಂತ ಬಹಳ ಮೇಲೆ ಹಾದು ಹೋಗಿತ್ತು.
Advertisement
ಬಳಿಕ ಪಾಕ್ ವಿರುದ್ಧದ 2005ರ ಕೋಲ್ಕತಾ ಟೆಸ್ಟ್ ಪಂದ್ಯದಲ್ಲೂ ಸಚಿನ್ “ಬಕ್ನರ್ ಬಲೆ’ಗೆ ಬಿದ್ದಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಬ್ದುಲ್ ರಜಾಕ್ ಎಸೆತವೊಂದು “ಎಜ್’ ಆಗಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಕೈಸೇರಿದಾಗ ಬಕ್ನರ್ ಬೆರಳೆತ್ತಿದ್ದರು. ಆದರೆ ಚೆಂಡು ಸಚಿನ್ ಬ್ಯಾಟಿಗೆ ತಾಗಿರಲಿಲ್ಲ ಎಂಬುದು ರೀಪ್ಲೇಯಲ್ಲಿ ಸ್ಪಷ್ಟವಾಗಿತ್ತು.
“ಇವೆರಡೂ ನನ್ನಿಂದ ಸಂಭ ವಿಸಿದ ತಪ್ಪುಗಳು. ಇದಕ್ಕೆ ಪಶ್ಚಾತ್ತಾಪ ಪಟ್ಟಿದ್ದೇನೆ. ಮನುಷ್ಯನಾದವನು ತಪ್ಪು ಮಾಡುವುದು ಸಹಜ. ಇದನ್ನು ಒಪ್ಪಿಕೊಳ್ಳುವುದು ನಮ್ಮ ದೊಡ್ಡತನ’ ಎಂಬುದಾಗಿ ಸ್ಟೀವ್ ಬಕ್ನರ್ ಹೇಳಿದರು.