Advertisement

ವಿಜ್ಞಾನಿ ಹಾಕಿಂಗ್‌ ಹೆಸರಲ್ಲಿ ಬಡವರಿಗೆ ಭೋಜನ

10:45 AM Apr 04, 2018 | Team Udayavani |

ಲಂಡನ್‌: ಬ್ರಿಟನ್‌ನ ಭೌತವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌ ಅವರು ಸಾವಿನಲ್ಲೂ ಕಾರುಣ್ಯ ಮೆರೆದಿದ್ದು, ಸಾವಿರಾರು ಮಂದಿ ನಿರ್ವಸಿತರು ಮತ್ತು ಬಡ ಜನರಿಗೆ ಈಸ್ಟರ್‌ ಹಬ್ಬದ ದಿನ ಅದ್ಧೂರಿ ಭೋಜನವನ್ನು ಒದಗಿಸಿದ್ದಾರೆ. ಹೌದು, ಮಾ.14ರಂದು ನಿಧನರಾದ ಹಾಕಿಂಗ್‌ ಅವರ ಅಂತ್ಯಸಂಸ್ಕಾರ ಈಸ್ಟರ್‌ ದಿನವೇ ನೆರವೇರಿತು. ಅಂದು ಕೇಂಬ್ರಿಜ್‌ ನಲ್ಲಿ ಹಾಕಿಂಗ್‌ ಕುಟುಂಬದ ಪರವಾಗಿ ಬಡವರಿಗೆ ಭರ್ಜರಿ ಭೋಜನವನ್ನು ನೀಡಲಾಯಿತು.

Advertisement

ಫ‌ುಡ್‌ ಸೈಕಲ್‌ ಎಂಬ ದತ್ತಿ ಸಂಸ್ಥೆಗೆ ಹಾಕಿಂಗ್‌ ಕುಟುಂಬವು ದೇಣಿಗೆಯನ್ನು ನೀಡಿ, ಅದನ್ನು ಹಸಿದವರಿಗೆ ಅನ್ನ ಹಾಕಲು ಬಳಸುವಂತೆ ಕೋರಿತ್ತು. ಅದರಂತೆ, ಅಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಯೊಂದು ಟೇಬಲ್‌ ಮೇಲೆಯೂ ಹೂಗುಚ್ಛ ಹಾಗೂ ಒಂದು ಪತ್ರವನ್ನು ಇಡಲಾಗಿತ್ತು. ಆ ಪತ್ರದಲ್ಲಿ, ‘ಇಂದಿನ ಭೋಜನವು ಸ್ಟೀಫ‌ನ್‌ ನೀಡಿರುವ ಗಿಫ್ಟ್. ಹಾಕಿಂಗ್‌ ಕುಟುಂಬದ ಕೊಡುಗೆಯಿದು’ ಎಂದು ಬರೆಯಲಾಗಿತ್ತು.

ಒಂದೆಡೆ ಲಂಡನ್‌ನ ಸೈಂಟ್‌ ಮೇರೀಸ್‌ ಚರ್ಚ್‌ನಲ್ಲಿ ಹಾಕಿಂಗ್‌ ಅಂತ್ಯಸಂಸ್ಕಾರದ ಪ್ರಕ್ರಿಯೆ ನಡೆಯುತ್ತಿದ್ದಂತೆ, ಇಲ್ಲಿ ಬಡ, ನಿರ್ವಸಿತರು ಹೊಟ್ಟೆತುಂಬಾ ಉಂಡು ಸಂತಸಪಟ್ಟರು. ಸ್ಟೀಫ‌ನ್‌ ಕುಟುಂಬದ ಈ ಕಾರ್ಯಕ್ಕೆ ಹಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next