Advertisement
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೆನ್ನಲ್ಲೇ ಮಾತನಾಡಿದ ಅವರು, ಸಮಾನ ನಾಗರಿಕ ಸಂಹಿತೆ ರೂಪಿಸುವ ಸಂಬಂಧ ಸಮಿತಿಯೊಂದನ್ನು ರಚಿಸಿದ್ದೇವೆ. ಸಮಿತಿಯ ಶಿಫಾರಸು ಆಧರಿಸಿ ಶೀಘ್ರವೇ ಯುಸಿಸಿ ಜಾರಿ ಮಾಡುತ್ತೇವೆ ಎಂದಿದ್ದಾರೆ.
Related Articles
ಶುಕ್ರವಾರ ಸಂಜೆಯಷ್ಟೇ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಯಾಗಿದ್ದ ದಿಲ್ಲಿಯ ಮೂವರು ಕಾಂಗ್ರೆಸ್ ಕೌನ್ಸಿಲರ್‌ಗಳು ರಾತೋರಾತ್ರಿ ವಾಪಸ್ ಕಾಂಗ್ರೆಸ್‌ಗೆ ಮರಳಿದ್ದಾರೆ! ರಾತ್ರಿ 2 ಗಂಟೆಗೆ ವೀಡಿಯೋ ಸಂದೇಶ ಹರಿಯಬಿಟ್ಟ ದಿಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹಿª, “ನಾನು ಹಾಗೂ ಇಬ್ಬರು ಕೌನ್ಸಿಲರ್‌ಗಳು ಆಪ್‌ಗೆ ಸೇರಿದ್ದೆವು. ನನ್ನ ತಂದೆ ಕಳೆದ 40 ವರ್ಷ ಗಳಿಂದಲೂ ಕಾಂಗ್ರೆಸ್‌ನಲ್ಲಿದ್ದರು. ಆದರೆ ನಾವು ದೊಡ್ಡ ತಪ್ಪು ಮಾಡಿದೆವು. ನಮ್ಮನ್ನು ಕ್ಷಮಿಸಿ, ತಪ್ಪಿನ ಅರಿವಾಗಿ ವಾಪಸ್ ಬಂದಿದ್ದೇವೆ’ ಎಂದು ಹೇಳಿದ್ದಾರೆ. ಈ ನಡುವೆ, ದಿಲ್ಲಿಯಲ್ಲಿ ಎಂಸಿಡಿ ಕೌನ್ಸಿಲರ್‌ಗಳಿಗೆ ಹಣದ ಆಮಿಷವೊಡ್ಡಿ ಪಕ್ಷಾಂತರಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಬಿಜೆಪಿ ಮತ್ತು ಆಪ್ ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿವೆ.
Advertisement
ಹಾಲು ಮಾರುತ್ತಿದ್ದ ಮುಖ್ಯಮಂತ್ರಿ ಸುಖುಕಳೆದ 40 ವರ್ಷಗಳಿಂದಲೂ ಪಕ್ಷಕ್ಕೆ ನಿಷ್ಠರಾಗಿ ದುಡಿಯುತ್ತಾ, ಕಾಂಗ್ರೆಸ್‌ನ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸುಖ್‌ವಿಂದರ್ ಸಿಂಗ್ ಸುಖು (58) ಈಗ ಹಿಮಾಚಲಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 2003ರಿಂದ ನದೌನ್ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿರುವ ಅವರು, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಟೀಕಾಕಾರನೆಂದೇ ಗುರುತಿಸಿಕೊಂಡವರು. ಸಿಎಂ ಹುದ್ದೆಯ ಪೈಪೋಟಿಯಲ್ಲಿದ್ದ ಪ್ರತಿಭಾ ಸಿಂಗ್ ಹಾಗೂ ಮುಕೇಶ್ ಅಗ್ನಿಹೋತ್ರಿ ಅವರು ದಿವಂಗತ “ರಾಜಾ’ ವೀರಭದ್ರ ಸಿಂಗ್ ಅವರ ನೆರಳಲ್ಲೇ ರಾಜಕೀಯಕ್ಕೆ ಪ್ರವೇಶ ಪಡೆದವರು. ಆದರೆ ಸುಖ್‌ವಿಂದರ್ ಅವರು ಸ್ವಸಾಮರ್ಥ್ಯ ದಿಂದಲೇ ಬೆಳೆದವರು. ಒಂದು ಕಾಲದಲ್ಲಿ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸುಖ್, ಎನ್‌ಎಸ್‌ಯುಐಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ನಾಯಕನಾಗಿ, ಅನಂತರ ಪಾಲಿಕೆ ಚುನಾವಣೆಯಲ್ಲಿ ಗೆದ್ದು, ರಾಜ್ಯ ರಾಜಕೀಯ ಪ್ರವೇಶಿಸಿದ ಅವರು, ಹಿಮಾಚಲದಲ್ಲಿ ಪಕ್ಷದ ಎಲ್ಲ ಹಂತಗಳಲ್ಲೂ ಅನುಭವ ಗಳಿಸುತ್ತಾ ಬಂದವರು. ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಅವರಿಗೆ “ಫೈರ್‌ಬ್ರ್ಯಾಂಡ್’ ಎಂಬ ಹೆಸರಿತ್ತು. ಪಕ್ಷದ ಕಾರ್ಯಕರ್ತರ ಮೇಲಿನ ಹಿಡಿತ, ಸ್ಥಳೀಯ ರೊಂದಿಗಿನ ಅವರ ಆತ್ಮೀಯ ನಂಟಿ ನಿಂದಾಗಿಯೇ ಹಮೀರ್ಪುರದ 5 ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಲಾಗಿದೆ. ಏಕೆಂದರೆ, ಇದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಪ್ರಭಾವವಿರುವ ಬಿಜೆಪಿಯ ಭದ್ರಕೋಟೆ. ಹೀಗಿದ್ದರೂ ತಮ್ಮ ಸಂಘಟನ ಸಾಮರ್ಥ್ಯದಿಂದಾಗಿ ಸುಖು ಅವರು ಎಲ್ಲ “ಅಲೆ’ಗಳನ್ನೂ ದಾಟಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿ ದ್ದರು. ಸಿಎಂ ಸ್ಥಾನಕ್ಕೆ ಸುಖ್‌ರನ್ನು ಆಯ್ಕೆ ಮಾಡುವ ಮೂಲಕ ಬೇರುಮಟ್ಟದ ಕಾರ್ಯಕರ್ತರಿಗೂ ಉನ್ನತ ಹುದ್ದೆ ನೀಡಲಾಗುತ್ತದೆ ಎಂಬ ಸಂದೇಶ ವನ್ನು ರಾಹುಲ್ ಗಾಂಧಿ ರವಾನಿಸಿದ್ದಾರೆ.