Advertisement
ಮೊದಲ ಹಂತದಲ್ಲಿ ಶೇ.69.56ರಷ್ಟು ಮತದಾನವಾಗಿದ್ದು, ಒಟ್ಟಾರೆಯಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಅಂದಾಜು ಸರಾಸರಿ ಶೇ. 70.48 ಮತ ಚಲಾವಣೆಯಾಗಿದೆ. ಇದ ರೊಂದಿಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪೂರ್ಣ ಗೊಂಡಂತಾಗಿದೆ. 7 ಹಂತಗಳ ಚುನಾವಣೆ ಜೂ. 1ರಂದು ಮುಕ್ತಾಯವಾಗಲಿದ್ದು, ಜೂ. 4ರಂದು ಫಲಿತಾಂಶ ಪ್ರಕಟ ವಾಗಲಿದೆ. ಹಾಗಾಗಿ ರಾಜ್ಯದ ಜನತೆ ಫಲಿತಾಂಶಕ್ಕಾಗಿ ಇನ್ನೂ 27 ದಿನ ಕಾಯಬೇಕಾಗಿದೆ.
2ನೇ ಹಂತದಲ್ಲಿ ಬಿಸಿಲು ಲೆಕ್ಕಿಸದೆ ಮತದಾರರು ಉತ್ಸಾಹ ತೋರಿದ್ದು, ಅಂತಿಮವಾಗಿ ಶೇ. 71.4 ಮತದಾನವಾಗಿದೆ. ಕಳೆದ ಬಾರಿಗಿಂತ ಶೇ. 2.55ರಷ್ಟು ಮತದಾನ ಹೆಚ್ಚಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ 14 ಕ್ಷೇತ್ರಗಳಲ್ಲಿ ಶೇ. 68.85ರಷ್ಟು ಮತದಾನವಾಗಿತ್ತು. ವಿಶೇಷವೆಂದರೆ ಮೊದಲ ಹಂತದಲ್ಲಿ ಮತದಾನ ನಡೆದ 14 ಕ್ಷೇತ್ರಗಳಿಗಿಂತ ಮಂಗಳವಾರ ಮತದಾನ ನಡೆದ 14 ಕ್ಷೇತ್ರಗಳಲ್ಲಿ ಪ್ರತೀ ಎರಡು ಗಂಟೆಗಳ ಸರಾಸರಿ ಮತದಾನದಲ್ಲಿ ಶೇ. 3ರಿಂದ 4ರಷ್ಟು ಹೆಚ್ಚಳವಾಗಿತ್ತು. ಅದರಂತೆ ಮೊದಲ ಹಂತದ 14 ಕ್ಷೇತ್ರಗಳ ಮತದಾರರಿಗಿಂತ ಎರಡನೇ ಹಂತದ 14 ಕೇತ್ರಗಳ ಮತದಾರರು ಮತದಾನದಲ್ಲಿ ಮೇಲುಗೈ ಸಾಧಿಸಿದ್ದಾರೆ. ಎರಡನೇ ಹಂತದಲ್ಲಿ ಅತೀ ಹೆಚ್ಚು ಮತದಾನ ಚಿಕ್ಕೋಡಿಯಲ್ಲಿ ಶೇ. 78.41 ಹಾಗೂ ಅತೀ ಕಡಿಮೆ ರಾಯಚೂರಿನಲ್ಲಿ ಶೇ. 62 ಮತದಾನವಾಗಿದೆ. ಸುರಪುರ ಉಪಚುನಾವಣೆ: ಶೇ.73.76 ಮತದಾನ
ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ಮಂಗಳವಾರ ನಡೆದ ಉಪಚುನಾವಣೆ ಸಣ್ಣಪುಟ್ಟ ಅಹಿತಕರ ಘಟನೆ ಹೊರತುಪಡಿಸಿದರೆ ಶಾಂತಿಯುತವಾಗಿತ್ತು. ಅಂದಾಜು ಶೇ.73.76 ಮತದಾನವಾಗಿದೆ.