ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದು ಕೇಂದ್ರ
ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
Advertisement
ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಟೆಂಟ್‌ಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿರುವುದು ಪತ್ತೆಯಾದರೆ ಹೆಚ್ಚುವರಿಯಾಗಿ ಪಡೆದ ಮೊತ್ತದಜತೆಗೆ ಶೇ.15ರಷ್ಟು ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದರು. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ದೃಷ್ಠಿಯಲ್ಲಿಟ್ಟುಕೊಂಡು ಫೆ.13ರಂದು “ಸ್ಟೆಂಟ್’ಗಳ ದರಗಳನ್ನು ಶೇ.85ರಷ್ಟು ಕಡಿಮೆ ಮಾಡುವ ತೀರ್ಮಾನವನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಆರೋಗ್ಯ ಭದ್ರತೆ ಒದಗಿಸಲು ಬದ್ಧವಾಗಿರುವ ಕೇಂದ್ರ ಸರ್ಕಾರ, ತನ್ನ ತೀರ್ಮಾನದ ಅನುಷ್ಠಾನದಲ್ಲೂ ಅಷ್ಟೇ ಕಾಳಜಿ ಹೊಂದಿದೆ. ಆದ್ದರಿಂದ ಬಡವರಿಗೆ ಅನುಕೂಲವಾಗಲಿ ಎಂದು ಸ್ಟೆಂಟ್‌ಗಳ ದರಗಳನ್ನು ಇಳಿಕೆ ಮಾಡಲಾಗಿದೆ ಎಂದು ಹೇಳಿದರು.
ನಿಗದಿಪಡಿಸಲಾಗಿದೆ. ದೇಶದಲ್ಲಿ ಸ್ಟೆಂಟ್‌ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ದರಗಳಲ್ಲೇ ಮಾರಾಟ ಮಾಡಬೇಕು. ಸ್ಟೆಂಟ್‌ಗಳ ಬೆಲೆ ಕಡಿಮೆ ಮಾಡಿರುವುದರಿಂದ ಅಂದಾಜು 5 ಸಾವಿರ ಕೋಟಿ ರೂ. ಉಳಿತಾಯ ಆಗಲಿದೆ ಎಂದು ಅನಂತಕುಮಾರ್ ತಿಳಿಸಿದರು. ಕೇಂದ್ರ ಆರೋಗ್ಯ ಸಚಿವಾಲಯದ 2015ರ ವರದಿ ಪ್ರಕಾರ ದೇಶದಲ್ಲಿ 6.19 ಕೋಟಿ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕಳೆದ ವರ್ಷ 4 ಲಕ್ಷ ಸ್ಟೆಂಟ್ ಅಳವಡಿಸಲಾಗಿತ್ತು. ಈ ವರ್ಷ ಅದು 5 ಲಕ್ಷ ಆಗುವ ಸಾಧ್ಯತೆಯಿದೆ. ಸ್ಟೆಂಟ್‌ಗಳ ಕೃತಕ
ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟಲು ಸ್ಟೆಂಟ್ ತಯಾರಕರು ಕಳೆದ 3 ವರ್ಷದಲ್ಲಿ ಪ್ರತಿ ವರ್ಷ ಎಷ್ಟು ಸಂಖ್ಯೆಯಲ್ಲಿ ಸ್ಟೆಂಟ್‌ಗಳನ್ನು ತಯಾರು ಮಾಡಿದ್ದರು, ಮುಂದಿನ ಒಂದು ವರ್ಷ ಅಷ್ಟೇ ಪ್ರಮಾಣದ ಸ್ಟೆಂಟ್‌ಗಳನ್ನು ತಯಾರು ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
Related Articles
Advertisement