Advertisement

ಬಾಂಜಾರುಮಲೆಗೆ ಸ್ಟೀಲ್‌ ಬ್ರಿಜ್‌

02:37 PM Aug 19, 2019 | keerthan |

ಬೆಳ್ತಂಗಡಿ: ಮಹಾ ಪ್ರವಾಹಕ್ಕೆ 53 ವರ್ಷಗಳ ಹಿಂದಿನ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿದುಕೊಂಡ ಬಾಂಜಾರುಮಲೆಗೆ ಜಿಲ್ಲಾಡಳಿತ ಹಾಗೂ ಶಾಸಕ ಹರೀಶ್‌ಪೂಂಜಾ ಆಶಯದಂತೆ ವಾರದೊಳಗೆ ಕಬ್ಬಿಣದ ಸೇತು ರಚನೆಯಾಗಿದೆ.

Advertisement

ಅಬ್ಬರದ ಅಣಿಯೂರು ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ ಮೂರೇ ದಿನಗಳಲ್ಲಿ ಸಂಕ ನಿರ್ಮಿಸಲಾಗಿದೆ. 42 ಅಡಿ ಉದ್ದ, 4 ಅಡಿ ಅಗಲದ ಸೇತುವೆಗೆ 5 ಲಕ್ಷ ರೂ. ವೆಚ್ಚವಾಗಿದೆ.

ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಯಶವಂತ್‌, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ ಅವರ ಕಾರ್ಯ ಯೋಜನೆಯಂತೆ ಪುತ್ತೂರು ಮಾಸ್ಟರ್‌ ಪ್ಲಾನರಿ ಆನಂದ್‌ ಅವರು ಕಬ್ಬಿಣದ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ.

ಜಿಲ್ಲಾಡಳಿತ, ಸ್ಥಳೀಯರ ಸಹಕಾರ ದೊಂದಿಗೆ ಬಾಂಜಾರುಮಲೆಗೆ ವಾಕಿಂಗ್‌ ಸ್ಟೀಲ್‌ ಬ್ರಿಜ್‌ ಮೂಲಕ ಮರು ಸಂಪರ್ಕ ಕಲ್ಪಿಸಲಾಗಿದೆ. ಕಾನರ್ಪದಿಂದ ಅನಾರಿಗೆ ಸಂಪರ್ಕ ರಸ್ತೆ ನಿರ್ಮಿಸಲಾಗುವುದು. ಈ ಎಲ್ಲ ಕೆಲಸಗಳಿಗೆ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಗುತ್ತಿಗೆದಾರರು ಉತ್ತಮ ಸ್ಪಂದನೆ ನೀಡಿದ್ದಾರೆ.
– ಹರೀಶ್‌ ಪೂಂಜಾ, ಶಾಸಕ

ಸೇತುವೆ ಮೇಲಿಂದ ದ್ವಿಚಕ್ರ ವಾಹನಗಳು ಸಾಗ ಬಹುದು. ಈಗಿರುವ ಸೇತುವೆಯ ಮಟ್ಟದಿಂದ 1.5 ಮೀ. ಎತ್ತರದಲ್ಲಿ ದೊಡ್ಡ ಹೊಸ ಸೇತುವೆ ಆದಲ್ಲಿ ಮತ್ತೆ ಸಮಸ್ಯೆಯಾಗದು.
ಶಿವಪ್ರಸಾದ್‌ ಅಜಿಲ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಪಿಡಬ್ಲ್ಯುಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next