ಬೆಂಗಳೂರು: ಸ್ನೇಹಿತೆ ಮನೆಯಲ್ಲಿ ಕಳವು ಮಾಡಿದ್ದ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಚೋಳೂರುಪಾಳ್ಯ ನಿವಾಸಿ ಲಕ್ಷ್ಮೀ(44) ಬಂಧಿತ ಮಹಿಳೆ. ಆಕೆಯಿಂದ 4.18 ಲಕ್ಷ ರೂ. ಮೌಲ್ಯದ 77.47 ಗ್ರಾಂ ಚಿನ್ನಾಭರಣ, 9.575 ರೂ. ಮೌಲ್ಯದ 159 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 2023ರ ಡಿ.12ರಂದು ಚೋಳೂರುಪಾಳ್ಯದ ಮನೆಯೊಂದರಲ್ಲಿ ಆರೋಪಿ ಕಳ್ಳತನ ಮಾಡಿದ್ದರು.
ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಲಕ್ಷ್ಮೀ, ಅನಾರೋಗ್ಯದಿಂದ ಬಳಲುತ್ತಿದ್ದರು. ಜತೆಗೆ ಪುತ್ರಿ ಮನೆಯಲ್ಲೂ ಕಷ್ಟ ಇದ್ದಿದ್ದರಿಂದ, ಮೊಮ್ಮಗಳಿಗೆ ಶಾಲೆಗೆ ಸೇರಿಸಲು ಹಣ ಹೊಂದಿಸುತ್ತಿದ್ದರು. ಆದರಿಂದ ಗಾರ್ಮೆಂಟ್ಸ್‌ನಲ್ಲಿ ಬರುತ್ತಿದ್ದ ಸಂಬಳದಿಂದ ಜೀವನ ನಿರ್ವಹಣೆ ಕಷ್ಟವಾಗಿತ್ತು.
ಈ ಮಧ್ಯೆ ಲಕ್ಷ್ಮೀ ಸ್ನೇಹಿತೆ, ಇತ್ತೀಚೆಗೆ ಹೊಸದಾಗಿ ಮಾಡಿಸಿಕೊಂಡಿದ್ದ ಚಿನ್ನಾಭರಣಗಳನ್ನು ಆರೋಪಿಗೆ ತೋರಿಸಿದ್ದರು. ಅದನ್ನು ಕಂಡ ಲಕ್ಷ್ಮೀ ಕಳವು ಮಾಡಿ, ಮಾರಾಟಕ್ಕೆ ಯೋಚಿಸಿದ್ದರು. ಈ ನಡುವೆ 2023ರ ಡಿ.24 ರಿಂದ 26ರವರೆಗೆ ಕಾರ್ಯನಿಮಿತ್ತ ಆರೋಪಿಯ ಸ್ನೇಹಿತೆ ಮನೆಗೆ ಬೀಗ ಹಾಕಿ ಕೊಂಡು ಬೇರೆ ಊರಿಗೆ ಹೋಗಿದ್ದರು. ಮನೆ ಕೀಯನ್ನು ಕೀಟಕಿ ಬಳಿ ಇಟ್ಟಿದ್ದರು. ಈ ವಿಚಾರ ತಿಳಿದ ಆರೋಪಿ ಲಕ್ಷ್ಮೀ, ಮನೆಯ ಕೀ ತೆಗೆ ದು ನೇರವಾಗಿ ಮನೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಡಿ.26ರಂದು ಮನೆ ಮಾಲೀಕರು ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ತಾಂತ್ರಿಕ ತನಿಖೆ ಹಾಗೂ ಬಾತ್ಮೀದಾರ ಮಾಹಿತಿ ಆಧರಿಸಿ ಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀ ಸರು ಹೇಳಿದರು.