Advertisement

Bike ಕದ್ದು ಹೆಲ್ಮೆಟ್‌ ಧರಿಸದೆ ಸವಾರಿ: ಮಾಲಕನಿಗೆ ನೋಟಿಸ್‌!

12:01 AM Mar 17, 2024 | Team Udayavani |

ಕಾಸರಗೋಡು: ಕಳ್ಳನೊಬ್ಬ ಕದ್ದ ಬೈಕಿನಲ್ಲಿ ಹೆಲ್ಮೆಟ್‌ ಧರಿಸದೆ ಸಂಚರಿಸಿದ ಪರಿಣಾಮ ಬೈಕಿನ ಮಾಲಕನಿಗೆ 1 ಸಾವಿರ ರೂ. ದಂಡ ಪಾವತಿಸುವಂತೆ ಮೋಟಾರು ವಾಹನ ಇಲಾಖೆಯಿಂದ ನೋಟಿಸ್‌ ಬಂದಿದೆ!

Advertisement

ಪಳ್ಳಿಕ್ಕೆರೆ ಗ್ರಾ.ಪಂ. ಅಧ್ಯಕ್ಷ ಎಂ. ಕುಮಾರನ್‌ ಅವರು ಡಿಸೆಂಬರ್‌ 29ರಂದು ಪಳ್ಳಿಕ್ಕೆರೆ ಗ್ರಾ.ಪಂ. ಕಚೇರಿ ಪರಿಸರದಲ್ಲಿ ನಿಲ್ಲಿಸಿದ್ದ ಬುಲೆಟ್‌ ಬೈಕ್‌ ಕಳವಾಗಿತ್ತು. ಬಳಿಕ ಆ ಬೈಕನ್ನು ಬೇಕಲ ಪೊಲೀಸರು ಕರ್ನಾಟಕದ ಶಿವಮೊಗ್ಗದಿಂದ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದರು. ಬೈಕನ್ನು ನ್ಯಾಯಾಲಯದ ಮೂಲಕ ವಾರಸುದಾರರಿಗೆ ಬಿಟ್ಟುಕೊಡಲಾಗಿತ್ತು. ಇದೆಲ್ಲ ಕಳೆದು ಎರಡು ತಿಂಗಳ ಬಳಿಕ ನೋಟಿಸ್‌ ಜಾರಿಯಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next