Advertisement

ಗಾಳಿ ಸುದ್ದಿಯಿಂದ ದೂರವಿರಿ : ಕಾಶ್ಮೀರ ಪ್ರಜೆಗಳಿಗೆ ಮನವಿ, ಕಟ್ಟೆಚ್ಚರ

01:23 PM Feb 27, 2019 | Team Udayavani |

ಜಮ್ಮು: ಭಾರತೀಯ ವಾಯುಪಡೆ ಬಾಲ್‌ಕೋಟ್‌ನಲ್ಲಿ ಜೈಶ್‌ ಉಗ್ರರನ್ನು ನಾಶಗೈದ ಬಳಿಕ ಪಾಕಿಸ್ಥಾನದೊಂದಿಗೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕಣಿವೆ ರಾಜ್ಯ ಕಾಶ್ಮೀರದಲ್ಲೂ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದ್ದು  ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಸಾಮಾಜಿಕ ತಾಣಗಳಲ್ಲಿ ಬರುವ ಗಾಳಿ ಸುದ್ದಿಗಳಿಂದ ಗೊಂದಲಕ್ಕೆ ಗುರಿಯಾಗಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ. 

Advertisement

ಗಾಳಿ ಸುದ್ದಿಗಳಿಂದ ಸಾರ್ವಜನಿಕರು ದೂರ ಇರಿ. ಯಾವುದೇ ಕ್ಷಣದಲ್ಲಿ ನಾವು ನೆರವು ನೀಡುತ್ತೇವೆ ಎಂದು ಪೊಲೀಸರು ಟ್ವೀಟ್‌ ಮೂಲಕ  ತಿಳಿಸಿದ್ದಾರೆ. ಸಾರ್ವಜನಿಕರಿಗಾಗಿ ತುರ್ತು ಸಹಾಯವಾಣಿಯನ್ನೂ ತೆರೆಯಲಾಗಿದೆ. 100 ಅಥವಾ 01942451515 ಕರೆ ಮಾಡಿ ತಿಳಿಸಲು ಮನವಿ ಮಾಡಿದ್ದಾರೆ. 

ಗಾಳಿ ಸುದ್ದಿ ಹಬ್ಬಿಸಿ ಶಾಂತಿ  ಕದಡಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುವಲ್ಲಿ ನಿರತವಾಗಿದ್ದು, ಬಂದ್‌ ಕರೆ , ಕರ್ಫ್ಯೂ ಕುರಿತಾಗಿ ಸುದ್ದಿ ಹಬ್ಬಿಸಿ ಗೊಂದಲ ನಿರ್ಮಾಣ ಮಾಡಿದ ಬೆನ್ನಲ್ಲೇ ಪೊಲೀಸರು ಈ ಮನವಿ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next