ಇಸ್ಲಾಮಾಬಾದ್: ಪಾಕಿಸ್ಥಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಹರಿಪುರ ಜಿಲ್ಲೆಯಲ್ಲಿದ್ದ ಹರಿಸಿಂಗ್ ನಲ್ವಾ ಅವರ ಪ್ರತಿಮೆಯನ್ನು ಅಲ್ಲಿನ ಸ್ಥಳೀಯ ಆಡಳಿತ ತೆರವುಗೊಳಿಸಿದೆ. ಸಿಕ್ಖ್ ಖಲ್ಸಾ ಆರ್ಮಿಯ ಕಮಾಂಡರ್ ಇನ್ ಚೀಫ್ ಆಗಿದ್ದ ನಾಯಕನ ಪ್ರತಿಮೆಯನ್ನೇ ತೆಗೆದಿರುವುದನ್ನು ವಿರೋಧಿಸಿ ಪಾಕ್‌ನ ಸಿಕ್ಖ್ ಸಮುದಾಯ ಗುರುವಾರ ಪ್ರತಿಭಟನೆ ನಡೆಸಿದೆ.
ಇದನ್ನೂ ಓದಿ:ರೇಣುಕಾಚಾರ್ಯ ವಿರುದ್ಧ ಹೈಕಮಾಂಡ್ ಗೆ ಸಚಿವರ ದೂರು: ದೆಹಲಿಯಿಂದ ಬುಲಾವ್
ಹರಿಸಿಂಗ್ ಅವರು ರಂಜಿತ್ ಸಿಂಗ್ ಅವರ ಸಾಮ್ರಾಜ್ಯವಿದ್ದ ಸಮಯದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಮುಲ್ತಾನ್, ಕಾಶ್ಮೀರ, ಪೇಶಾವರ ಯುದ್ಧ ಸೇರಿ ಹತ್ತಕ್ಕೂ ಹೆಚ್ಚು ಪ್ರಮುಖ ಯುದ್ಧಗಳಲ್ಲಿ ಹೋರಾಡಿ ಗೆದ್ದಿದ್ದರು. ಅವರ ಧೀರ ನಾಯಕತ್ವವನ್ನು ಗುರುತಿಸಿ 2017ರಲ್ಲಿ ಹರಿಪುರ ಜಿಲ್ಲೆಯಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿತ್ತು. ಹರಿ ಸಿಂಗ್ ಅವರು ಇಪ್ಪತ್ತಕ್ಕೂ ಅಧಿಕ ಯುದ್ಧಗಳಲ್ಲಿ ಪಾಲ್ಗೊಂಡು ದೊರೆ ರಂಜಿತ್ ಸಿಂಗ್‌ನ ಸಾಮ್ರಾಜ್ಯ ವಿಸ್ತರಿಸುವಲ್ಲಿ ಪ್ರಧಾನಪಾತ್ರ ವಹಿಸಿದ್ದರು.
ಕ್ರಿಪ್ಟೋಗೆ ಮಾನ್ಯತೆ ನೀಡುವುದಿಲ್ಲ: ಕೇಂದ್ರ
ಹೊಸದಿಲ್ಲಿ: ದೇಶದಲ್ಲಿ ಕ್ರಿಪ್ಟೋ ಕರೆನ್ಸಿಗೆ ಹಾಲಿ ಇರುವ ಕರೆನ್ಸಿ ನೋಟುಗಳಿಗೆ ಇರುವ ಮಾನ್ಯತೆಯನ್ನು ನೀಡಲಾಗುವುದಿಲ್ಲ. ಹೀಗೆಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥ್ ಗುರುವಾರ ತಿಳಿಸಿದ್ದಾರೆ.
ಗುರುವಾರ ಸಂದ ರ್ಶನವೊಂದರಲ್ಲಿ ಮಾತನಾಡಿದ ಅವರು, ಖಾಸಗಿ ಸಂಸ್ಥೆಗಳಿಂದ ಚಲಾವಣೆಯಲ್ಲಿ ಇರುವ ಕ್ರಿಪ್ಟೋ ಕರೆನ್ಸಿಗೆ ಮಾನ್ಯತೆ ನೀಡುವ ಇರಾದೆ ಸರಕಾರಕ್ಕೆ ಇಲ್ಲವೆಂದು ಹೇಳಿದ್ದಾರೆ. ಚಿನ್ನ, ಬೆಳ್ಳಿ, ವಜ್ರದಂತೆ ಕ್ರಿಪ್ರೋ ಕರೆನ್ಸಿ ಕೂಡ ಒಂದು ಬೆಲೆ ಬಾಳುವ ವಸ್ತು ಎಂದು ಪರಿಗಣಿಸಲಾಗುತ್ತದೆ ಎಂದರು. ಇದೇ ವೇಳೆ, ಶೇ.30ರಷ್ಟು ತೆರಿಗೆ ವಿಧಿಸುವ ಪ್ರಸ್ತಾವದಿಂದ 1 ಲಕ್ಷ ಕೋಟಿ ರೂ. ವರೆಗೆ ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಸಿಬಿಡಿಟಿ ಅಧ್ಯಕ್ಷ ಜೆ.ಬಿ.ಮೊಹಾಪಾತ್ರಾ ಹೇಳಿದ್ದಾರೆ.