Advertisement

ದೆಹಲಿಯಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆ ಸ್ಥಾಪನೆಯಾಗಲಿ: ಜಯಚಂದ್ರ

03:59 PM Mar 18, 2018 | |

ಮುಂಬಯಿ: ದೆಹಲಿ ಕರ್ನಾಟಕ ಸಂಘದ ವತಿಯಿಂದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಯುಕ್ತವಾಗಿ ಆಚರಿಸುತ್ತಿರುವ ರಾಷ್ಟ್ರೀಯ ಅಬ್ಬಕ್ಕ ಉತ್ಸವದ ಆರನೇ ದಿನವಾದ ಇಂದು ತೆಲುಗು ಭಾಷೆಯಲ್ಲಿ ರಾಣಿ ಅಬ್ಬಕ್ಕನ ಕುರಿತು ನವದೆಹಲಿ ಕರ್‌ಕರ್‌ ಡೂಮ್‌ಕೋಟ್‌ ಜಿಲ್ಲಾ ಸತ್ರ ನ್ಯಾಯಾಧೀಶ ಎ. ಎಸ್‌. ಜಯಚಂದ್ರ ಉಪನ್ಯಾಸ ನೀಡಿದರು.

Advertisement

ಎ. ಎಸ್‌. ಜಯಚಂದ್ರ ಅವರು ಮಾತನಾಡಿ, ರಾಣಿ ಅಬ್ಬಕ್ಕನ ಇತಿಹಾಸವನ್ನು ವಿವರಿಸಿ,  ತೆಲುಗು ಮತ್ತು ತುಳು ಭಾಷೆಯ ಆಗಿನ ಕಾಲದ ಸಂಬಂಧದ ಬಗ್ಗೆ ಹೊಸ ಸುಳಿವೊಂದನ್ನು ನೀಡಿದರು. ಮಹಿಳೆಯರ ಅಗಿನ ಜೀವನ ಸ್ಥಿತಿಯ ಬಗ್ಗೆ ವಿವರಿಸುತ್ತ, ಮಹಿಳಾ ದಿನಾಚರಣೆಯ ಈ ತಿಂಗಳಿನಲ್ಲಿ ರಾಣಿ ಅಬ್ಬಕ್ಕನ ಉತ್ಸವವನ್ನು ಆಚರಿಸುತ್ತಿರುವುದರ ಮಹತ್ವವನ್ನು ತಿಳಿಸಿದರು. ತುಳು ಹಾಗೂ ತೆಲುಗು ಸಂಪ್ರದಾಯದ ನಂಟನ್ನು ವಿವರಿಸಿ ಇಂದಿನ ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಪ್ರಖ್ಯಾತರಾದ ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರಕಾಶ್‌ ರೈ,  ಸುಮನ್‌ ಮುಂತಾದವರು ತುಳುವರು ಎಂದು ಹೇಳಿದರು. ಈ ಉತ್ಸವದ ಮೂಲಕ ದೆಹಲಿಯಲ್ಲಿರುವ ತೆಲುಗು ಭಾಷಿಕ‌ರಿಗೆ ತುಳು ನಾಡಿನರಾಣಿಯ ಪರಿಚಯ ಮಾಡಿಸಿದ್ದು ಉತ್ತಮ ಪ್ರಯತ್ನ. ಮಹಿಳಾ ಸ್ವಾತಂತ್ರÂ  ಹೋರಾಟಗಾರ್ತಿ ಎಂದರೆ ನಮಗೆ ಮೊದಲು ನೆನಪಾಗುವುದು ಝಾನ್ಸಿರಾಣಿ ಲಕ್ಷ್ಮೀ ಬಾಯಿ ಮಾತ್ರ, ರಾಣಿ ಅಬ್ಬಕ್ಕನ ಬಗ್ಗೆ ಎಲ್ಲಿಯೂ ಕಂಡು ಬರುವುದಿಲ್ಲ. ಆದ್ದರಿಂದ ಈ ಉತ್ಸವ ಮತ್ತಷ್ಟು ಸಾರ್ಥಕ ವಾಗಬೇಕೆಂದರೆ ದೆಹಲಿಯ ಯಾವುದಾದರೂ ಪ್ರಸಿದ್ಧ ಸ್ಥಳದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆ ಸ್ಥಾಪನೆ ಆಗಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ| ಎಂ. ಎಸ್‌. ಶಶಿಕುಮಾರ್‌ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕೋಶಾಧಿಕಾರಿ ಕೆ. ಎಸ್‌. ಜಿ. ಶೆಟ್ಟಿ ಅವರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ಈ ಕಾರ್ಯಕ್ರಮದ ಸಂಚಾಲಕತ್ವವನ್ನು ವಹಿಸಿದ್ದರು.ಈ ಸಂದರ್ಭದಲ್ಲಿ ರಾಷ್ಟ್ರೀಯಗ್ರಾಹಕ ವ್ಯಾಜ್ಯಗಳ ಪರಿಹಾರ ಸಂಸ್ಥೆಯ ಸದಸ್ಯ ರಾದ ಡಾ| ಎಸ್‌.ಎಂ. ಕಂಠೀಕರ್‌ ಹಾಗೂ ಸ್ಥಳೀಯ ಅನೇಕ ತೆಲುಗು ಭಾಷಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next