ಆ. 7 ರಂದು ಪೂರ್ವಾಹ್ನ ಪುತ್ತೂರು ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ನಡೆಯುವ ಟೋಪ್ಕೋ ಝಂ ಝಂ ಜುವೆಲರಿಯ ಉದ್ಘಾಟನೆ ಸಮಾರಂಭದಲ್ಲಿ ಈ ಪ್ರತಿಮೆ ಮಾನವ ಆಕರ್ಷಣಾ ಕೇಂದ್ರವಾಗಲಿದ್ದಾರೆ.
Advertisement
ಈ ಪ್ರತಿಮೆ ಮಾನವನನ್ನು ಯಾರೂ ನಗಿಸಲು ಪ್ರಯತ್ನಿಸಬಹುದು. ಇದು ಸಾರ್ವಜನಿಕರಿಗೊಂದು ಸವಾಲ್. ಆ ಸಾಮರ್ಥ್ಯವಿದ್ದರೆ ಟೋಪ್ಕೋ ಝಂ ಝಂ ಜುವೆಲರಿ ಸ್ಥಳದಲ್ಲೇ 51 ಸಾವಿರ ರೂ. ನಗದು ಬಹುಮಾನ ನೀಡಲಿದೆ.
ಈ ಪ್ರತಿಮೆ ಮಾನವ ಚೆನ್ನೈಯ ಪನಿಯೂರಿನವರು. ಹೆಸರು ಮಹಮ್ಮದ್ ರಫೀಕ್. 53 ರ ಹರೆಯದ ರಫೀಕ್ ತನ್ನ ಸ್ವ ಸಾಮರ್ಥ್ಯದಿಂದ ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕಳೆದ 35 ವರ್ಷಗಳಿಂದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರತವಲ್ಲದೆ ದುಬೈ, ಮಲೇಷ್ಯಾ, ಮಸ್ಕತ್ ನಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ರಫೀಕ್ ಪ್ರತಿಭೆಯನ್ನು ಗುರುತಿಸಿ ಚಿದಂಬರಂ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಅಂದಿನ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದರು.