Advertisement
ಗಣಿತ ಅಥವಾ ಸ್ಯಾಟಿಸ್ಟಿಕ್ಸ್ ವಿಷಯಗಳಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದಲ್ಲಿ ಮುಖ್ಯವಾಗಿ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ.ಗಳಿಸಬಹುದು. ಮೂರು ವರ್ಷದ ಪದವಿ, ಎರಡು ವರ್ಷಗಳ ಸ್ನಾತಕೋತ್ತರ ಪದವಿ, ಆರು ತಿಂಗಳಿಂದ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಮತ್ತು ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿವೆ. ಈ ಕೋರ್ಸ್‌ಗಳಲ್ಲಿ ದತ್ತಾ¤ಂಶ ಸಂಗ್ರಹಣೆ, ತರ್ಕಬದ್ಧ ವಿಶ್ಲೇಷಣೆ, ಸಂಖ್ಯಾಶಾಸ್ತ್ರೀಯ ಜಿಜ್ಞಾಸೆ, ದತ್ತಾಂಶದ ಮೌಲ್ಯ ನಿರ್ಣಯ, ಅಂಕಿ-ಸಂಖ್ಯೆ ಗಣಿತದ ಮೂಲಸಿದ್ಧಾಂತಗಳನ್ನು ಕಲಿಸಿಕೊಡಲಾಗುತ್ತದೆ. ಸಂಖ್ಯಾಶಾಸ್ತ್ರಜ್ಞರು ಸಮಸ್ಯೆ ಬಿಡಿಸುವುದು, ಬದಲಾಗುತ್ತಿರುವ ಅಂಕಿ-ಅಂಶಗಳ ತ್ವರಿತ ತಿಳಿವಳಿಕೆ, ಸಂಖ್ಯಾಶಾಸ್ತ್ರದ ವಿಸ್ತೃತ ಮತ್ತು ಖಚಿತ ಜ್ಞಾನ ಹೊಂದಿ ಉದ್ಯಮ, ಸರಕಾರ ಅಥವಾ ಇತರ ಸಂಸ್ಥೆಗಳು ಬಯಸುವ ಕೌಶಲವನ್ನು ಹೊಂದಿದವರಾಗಿರುತ್ತಾರೆ.
ದ್ವಿತೀಯ ಪಿಯುಸಿಯಲ್ಲಿ ಮ್ಯಾತಮ್ಯಾಟಿಕ್ಸ್ ಅಥವಾ ಸ್ಟಾಟಿಸ್ಟಿಕ್ಸ್ ವಿಷಯವನ್ನು ಕಡ್ಡಾಯವಾಗಿ ಓದಿರುವವರು ಈ ಕೋರ್ಸ್‌ಗಳನ್ನು ಮಾಡಬಹುದು. ಸ್ಟಾಟಿಸ್ಟಿಕ್ಸ್‌ನಲ್ಲಿ ಬ್ಯಾಚುಲರ್ ಪದವಿ ಪೂರ್ಣಗೊಳಿಸಿ ಮಾಸ್ಟರ್ ಕೋರ್ಸ್ ಮಾಡಬಹುದು. ಲೋಕಸೇವಾ ಪರೀಕ್ಷೆಗಳನ್ನು ಕೂಡ ಬರೆಯಬಹುದು. ಸ್ಟಾಟಿಸ್ಟೀಷಿಯನ್, ರಿಸ್ಕ್ ಅನಾಲಿಸ್ಟ್, ಲೆಕ್ಚರರ್, ಪ್ರೊಫೆಸರ್, ಕಂಟೆಂಟ್ ಅನಾಲಿಸ್ಟ್, ಸ್ಟಾಟಿಸ್ಟಿಕ್ ಟ್ರೈನರ್, ಡಾಟಾ ಸೈಂಟಿಸ್ಟ್, ಕನ್ಸಲ್ಟೆಂಟ್, ಬಯೋಸ್ಟಾಟಿಸ್ಟೀಶಿಯನ್ ಹೀಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ. ಅಲ್ಲದೆ ಡಾಟಾ ಸರ್ವೆ ಏಜೆನ್ಸಿಗಳು, ಪ್ಲಾನಿಂಗ್ ಕಮಿಷನ್‌ಗಳು, ಎಕನಾಮಿಕ್ ಬ್ಯೂರೋಗಳಲ್ಲಿಯೂ ಅವಕಾಶಗಳಿರುತ್ತವೆ. ಸ್ಟಾಟಿಸ್ಟಿಕ್ಸ್‌ನಲ್ಲಿ ಬಿಎಸ್‌ಸಿ, ಎಂಎಸ್‌ಸಿ ಪೂರೈಸಿದವರಿಗೆ ಮಾಹಿತಿ ತಂತ್ರಜ್ಞಾನ, ವಿಮೆ, ಬ್ಯಾಂಕಿಂಗ್ ಮೊದಲಾದ ಖಾಸಗಿ ಮತ್ತು ಸರಕಾರಿ ಕ್ಷೇತ್ರಗಳಲ್ಲಿಯೂ ಅಪಾರ ಅವಕಾಶಗಳಿರುತ್ತವೆ.
Related Articles
ಸರ್ಟಿಫಿಕೇಟ್ ಇನ್ ಸ್ಟಾಟಿಸ್ಟಿಕಲ್ ಮೆಥಡ್ಸ್ ಆ್ಯಂಡ್ ಅಪ್ಲಿಕೇಶನ್ಸ್
ಡಿಪ್ಲೊಮಾ ಕೋರ್ಸಸ್ ಇನ್ ಸ್ಟಾಟಿಸ್ಟಿಕ್ಸ್
ಬ್ಯಾಚುಲರ್ ಆಫ್ ಆರ್ಟ್ಸ್(ಬಿಎ) ಇನ್ ಸ್ಟಾಟಿಸ್ಟಿಕ್ಸ್
ಬ್ಯಾಚುಲೆರ್ ಆಫ್ ಸಾಯನ್ಸ್ ಇನ್ ಸ್ಟಾಟಿಸ್ಟಿಕ್ಸ್
ಮಾಸ್ಟರ್ ಆಫ್ ಆರ್ಟ್ಸ್ ಇನ್ ಸ್ಟಾಟಿಸ್ಟಿಕ್ಸ್
ಮಾಸ್ಟರ್ ಇನ್ ಸ್ಟಾಟಿಸ್ಟಿಕ್ಸ್
ಮಾಸ್ಟರ್ ಆಫ್ ಸಾಯನ್ಸ್ ಇನ್ ಸ್ಟಾಟಿಸ್ಟಿಕ್ಸ್
ಮಾಸ್ಟರ್ ಆಫ್ ಫಿಲಾಸಫಿ ಇನ್ ಸ್ಟಾಟಿಸ್ಟಿಕ್ಸ್
Advertisement
- ಸಂತೋಷ್ ಬೊಳ್ಳೆಟ್ಟು