Advertisement

IT notice 12ಕೋಟಿ ರೂ ವಹಿವಾಟು; ಸ್ಟೇಷನರಿ ಅಂಗಡಿ ಮಾಲಕನಿಗೆ ಶಾಕ್!!

07:19 PM Apr 05, 2023 | Team Udayavani |

ಭಿಲ್ವಾರ: ರಾಜಸ್ಥಾನದಲ್ಲಿ ದೈಹಿಕ ವಿಕಲಚೇತನ ಸ್ಟೇಷನರಿ ಅಂಗಡಿ ಮಾಲಕರೊಬ್ಬರು ತಾವು ಮಾಡದ 12.23 ಕೋಟಿ ರೂಪಾಯಿ ವಹಿವಾಟಿಗೆ ಆದಾಯ ತೆರಿಗೆ ಇಲಾಖೆಯಿಂದ ಶೋಕಾಸ್ ನೋಟಿಸ್ ಸ್ವೀಕರಿಸಿರುವುದಾಗಿ ಬುಧವಾರ ಹೇಳಿದ್ದಾರೆ.

Advertisement

ಸಂಜಯ್ ಕಾಲೋನಿಯ ನಿವಾಸಿ ಕಿಶನ್ಗೋಪಾಲ್ ಚಪರ್ವಾಲ್ ಅವರು ಸುಭಾಷ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಯಾರೋ ತಮ್ಮ ಹಣಕಾಸಿನ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚಾಪರ್ವಾಲ್ ಅವರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದು, ಸಮಯವಿದ್ದಾಗ ಮದುವೆ, ಸಮಾರಂಭಗಳಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ಮಾರ್ಚ್ 28 ರಂದು ಅಂಚೆ ಮೂಲಕ ಬಂದಿರುವ ನೋಟಿಸ್ ತನ್ನನ್ನು ಮತ್ತು ಕುಟುಂಬವನ್ನು ಆಘಾತಗೊಳಿಸಿದೆ ಎಂದು ಚಾಪರ್ವಾಲ್ ಹೇಳಿದ್ದು, ಚಾರ್ಟರ್ಡ್ ಅಕೌಂಟೆಂಟ್ ಅನ್ನು ಸಂಪರ್ಕಿಸಿದಾಗ, ಮುಂಬೈ ಮತ್ತು ಸೂರತ್‌ನಲ್ಲಿ ಎರಡು ಡೈಮಂಡ್ ಶೆಲ್ ಕಂಪನಿಗಳಿಗೆ ಹಲವಾರು ಕೋಟಿಗಳಷ್ಟು ನಕಲಿ ವಹಿವಾಟು ನಡೆಸಲು ತಮ್ಮ ಪ್ಯಾನ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

”ಸಾಲ ಪಡೆದು ಅಂಗಡಿ ಇಟ್ಟಿದ್ದೇನೆ. ಕಂತುಗಳನ್ನು ಪಾವತಿಸಲು ನನಗೆ ಸಾಧ್ಯವಾಗುತ್ತಿಲ್ಲ. ನಾನು ತಿಂಗಳಿಗೆ 8,000 ರಿಂದ 10,000 ರೂ. ಈ ಬೋಗಸ್ ಕಂಪನಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕೆಲ ವಂಚಕರು ನನಗೆ ಮೋಸ ಮಾಡಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

Advertisement

12.23 ಕೋಟಿ ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸಲು ಐಟಿ ಇಲಾಖೆ ನನಗೆ ನೋಟಿಸ್ ಕಳುಹಿಸಿದೆ. ಈ ವಿಚಾರದಲ್ಲಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next