Advertisement
ಪತ್ರಿಕಾ ಪ್ರಕಟನೆ ನೀಡಿರುವ ಅವರು, ಹಾಲಿನ ದರ ಏರಿಸುವಂತೆ ಸಹಕಾರ ಸಚಿವರಿಗೆ ಮಾಗಡಿಯಲ್ಲಿ ಸಿಎಂ ಸೂಚಿಸಿರುವುದು ಖಂಡನೀಯ. ಈಗಾಗಲೇ ರಾಜ್ಯದ ಜನತೆ ನೀರು, ವಿದ್ಯುತ್, ಮನೆ ಬಾಡಿಗೆ ಸೇರಿದಂತೆ ಅನೇಕ ದರ ಏರಿಕೆಯ ಆಘಾತದೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸರಕಾರವು ಮೊದಲು ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಯಾರ ಬಳಿಯೋ ಕಿತ್ತುಕೊಂಡು ಯಾರಿಗೊ ದಾನ ಮಾಡಿದ ರೀತಿ ಇದೆ. ಗ್ರಾಹಕರ ಮೇಲೆ ಹೊರೆ ಹಾಕಿ ರೈತರಿಗೆ ಪ್ರೋತ್ಸಾಹಧನ ಕೊಡುತ್ತೇವೆ ಎನ್ನುತ್ತಾರೆ ಎಂದು ಹಾಲಿನ ದರ ಏರಿಕೆಯ ಬಗ್ಗೆಗಿನ ರಾಜ್ಯ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಖಂಡಿಸಿದ್ದಾರೆ. ಹಾಲು ಉತ್ಪಾದಕರ ಸಂಘದ ಜಿÇÉೆಗಳಲ್ಲಿ 1.50, 2 ರೂಪಾಯಿ ಏಕೆ ಕಡಿಮೆ
ಮಾಡಿದ್ದೀರಾ? ಬೆಲೆ ಏರಿಕೆ ದುಡ್ಡ ನ್ನು ರೈತರಿಗೆ ಕೊಡುತ್ತೇವೆ ಎನ್ನು ತ್ತೀದ್ದಿರಲ್ಲವೇ? ಹಾಗಾದೆರೆ ಯಾವ ಯಾವ ಜಿÇÉೆಯಲ್ಲಿ ಎಷ್ಟೆಷ್ಟು ಹಾಲಿನ ಪ್ರೋತ್ಸಾಹ ದರ ಕಡಿಮೆ ಮಾಡಿದ್ದೀರಾ? ದಾಖಲೆ ಇಲ್ವಾ, ಪಟ್ಟಿ ಇಲ್ವಾ? ರೈತರಿಗೆ ಕೊಡುತ್ತೇವೆ ಅಂತ ಸುಳ್ಳು ಹೇಳಿ, ಒಂದು ಕಡೆ ರೈತರಿಗೂ ಇಲ್ಲ, ಮತ್ತೂಂದು ಕಡೆ ಗ್ರಾಹಕರಿಗೂ ಇಲ್ಲ. ದುಡ್ಡು ಮಾತ್ರ ಸರಕಾರ ವಸೂಲಿ ಮಾಡುತ್ತಿದೆ ಎಂದಿದ್ದಾರೆ.