ನವ ದೆಹಲಿ : ಲಸಿಕೆಗಳಿಗೆ ಬೇರೆ ಬೆರೆ ಬೆಲೆಗಳನ್ನು ಅನುಮತಿಸುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಖಂಡಿಸಿದ್ದಾರೆ.
ಲಸಿಕೆಗಳ ಬೆಲೆಯಲ್ಲಿ ತಾರತಮ್ಯದ ಅಗತ್ಯವಿಲ್ಲ. ರಾಜ್ಯಗಳು ಉತ್ಪಾದಕರು ಜಂಟಿಯಾಗಿ ಏಕರೂಪದ ದರವನ್ನು ರೂಪಿಸಲು ಬೆಲೆ ಸಮಾಲೋಚನಾ ಸಮಿತಿಯನ್ನು ರಚಿಸುವಂತೆ ಅವರು ಸೂಚಿಸಿದ್ದಾರೆ.
ಇನ್ನು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಚಿದಂಬರಂ, ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯನ್ನು ಮರೆತಿದೆ, ಕಾರ್ಪೊರೇಟ್ ಲಾಭಕ್ಕೆ ಶರಣಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಸುದ್ದಿಯನ್ನು ಖಚಿತ ಪಡಿಸಿಕೊಳ್ಳದೆ ವರದಿ ಮಾಡಲು ಅಷ್ಟೊಂದು ಆತುರವೇಕೆ..? : ಸುಮಿತ್ರಾ ಮಹಾಜನ್
ಲಸಿಕೆಗಳಿಗೆ ಬೇರೆ ಬೇರೆ ಬೆಲೆಗಳನ್ನು ಅನುಮತಿಸುವ ಕೇಂದ್ರ ಸರ್ಕಾರದ ನಿರ್ಧಾರವು ತಾರತಮ್ಯವಾಗಿದೆ. ರಾಜ್ಯಗಳು ಈ ನಿರ್ಧಾರವನ್ನು ಸರ್ವಾನುಮತದಿಂದ ತಿರಸ್ಕರಿಸಬೇಕು ಎಂದು ಅವರು ಕಿಡಿ ಕಾರಿದ್ದಾರೆ.
ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ರಾಜ್ಯಗಳು ಉತ್ಪಾದಕರು ಜಂಟಿಯಾಗಿ ಏಕರೂಪದ ದರವನ್ನು ರೂಪಿಸಲು ಬೆಲೆ ಸಮಾಲೋಚನಾ ಸಮಿತಿಯನ್ನು ರಚಿಸುವುದರ ಮೂಲಕ ಲಸಿಕೆಗಳ ಬೆಲೆಯಲ್ಲಿನ ಭಿನ್ನತೆಯನ್ನು ನಿವಾರಿಸಲು ಸಾಧ್ಯವಿದೆ ಎಂದಿದ್ದಾರೆ.
ಈ ಬೆಲೆ ಸಮಾಲೋಚನಾ ಸಮಿತಿಯಿಂದ ಉತ್ಪಾದಕರಲ್ಲಿ ಸಮಾನ ಬೆಲೆಯಲ್ಲಿ ಲಸಿಕೆಗಳನ್ನು ನೀಡುವುದಕ್ಕೆ ಸಾಧ್ಯವಿದೆ. ಈ ಕಾರ್ಯವನ್ನು ಮಾಡುವುದನ್ನು ಹೊರತಾಗಿ ಕೇಂದ್ರ ಸರ್ಕಾರ ಕಾರ್ಪೊರೇಟ್ ಲಾಭಕ್ಕೆ ಶರಣಾಗಿದೆ ಎಂದು ಆಕ್ರೊಶ ವ್ಯಕ್ತ ಪಡಿಸಿದ್ದಾರೆ.
ಇನ್ನು, ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ 19 ಲಸಿಕೆ ಪಡೆಯಬಹುದು ಎಂದು ಕೇಂದ್ರ ಸೋಮವಾರ(ಏಪ್ರಿಲ್ 19)ದಂದು ಹೇಳಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಡ್ 19 ಲಸಿಕೆ ‘ಕೋವಿಶೀಲ್ಡ್’ ನ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ಗಳಂತೆ ನೀಡಲಿದೆ ಎಂದು ಇತ್ತೀಚೆಗಷ್ಟೇ ಘೋಷಿಸಿದೆ.
ಇದನ್ನೂ ಓದಿ : ಮಹೀಂದ್ರಾ ನೀಡುತ್ತಿದೆ ಲಾಭದಾಯಕ ಆಫರ್..! ಇಲ್ಲಿದೆ ಪೂರ್ಣ ಮಾಹಿತಿ