ಬೆಂಗಳೂರು: ಪ್ತಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಕಾಲೇಜು ಹಂತದಲ್ಲೇ ಮಂಗಳವಾರ ಪ್ರಟಿಸಲಾಗಿದೆ.
ವಿದ್ಯಾರ್ಥಿಗಳು ಅಥವಾ ಅವರ ಪಾಲಕ, ಪೋಷಕರಿಗೆ ಕಾಲೇಜುಗಳಿಂದಲೇ ನೇರವಾಗಿ ಇ-ಮೇಲ್, ಮೊಬೈಲ್ ಮೂಲಕ ಫಲಿತಾಂಶಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತಿದೆ. ಕೆಲವೊಂದು ಜಿಲ್ಲೆಗಳಲ್ಲಿ ಪಿಯುಸಿ ಇಲಾಖೆಯ ಜಿಲ್ಲಾಮಟ್ಟದ ವೆಬ್ ಸೈಟ್ ಗಳಲ್ಲೂ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ಪ್ರಾಂಶುಪಾಲರಿಗೆ ಕರೆ ಮಾಡಿ ಫಲಿತಾಂಶ ತಿಳಿದುಕೊಳ್ಳಬಹುದು ಎಂದು ಪಿಯು ಇಲಾಖೆ ತಿಳಿಸಿದೆ.
ಮಂಗಳೂರು, ರಾಮನಗರ ಹಾಗೂ ಬೆಂಗಳೂರು ದಕ್ಷಿಣ ಮೊದಲಾದ ಜಿಲ್ಲೆಗಳ ಪ್ರಥಮ ಪಿಯುಸಿ ಫಲಿತಾಂಶವು ಸುವಿಧಾ ಜಾಲತಾಣದಲ್ಲಿ ಲಭ್ಯವಿದೆ. ಈ ಜಿಲ್ಲೆಗಳ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶ ಪಡೆಯ ಬಹುದು.
ಈ ವರ್ಷ ಸುಮಾರು 6.53 ಲಕ್ಷ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ ಕಲಾ ವಿಭಾಗದ 2 ಲಕ್ಷ, ವಾಣಿಜ್ಯ ವಿಭಾಗದ 2.48 ಲಕ್ಷ ಹಾಗೂ ವಿಜ್ಞಾನ ವಿಭಾಗದ 2.04 ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ.
ಲಾಕ್ ಡೌನ್ ಅವಧಿ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿಗಳ್ಯಾರೂ ಕಾಲೇಜಿಗೆ ಫಲಿತಾಂಶ ನೋಡಲು ಬರಬಾರದು ಮತ್ತು ಕಾಲೇಜಿನಿಂದಲೂ ವಿದ್ಯಾರ್ಥಿಗಳನ್ನು ಆಹ್ವಾನಿಸಬಾರದು. ಇ-ಮೇಲ್ ಹಾಗೂ ಮೊಬೈಲ್ ಮೂಲಕವೇ ಫಲಿತಾಂಶ ನೀಡಬೇಕು ಎಂಬ ಸೂಚನೆಯನ್ನು ಈ ಹಿಂದೆ ನೀಡಿತ್ತು.