Advertisement

ಸ್ಟ್ರೈವ್ ಗೆ ಮಂಗಳೂರಿನ ಕ್ಲಸ್ಟರ್‌ ಸಿದ್ಧ :ಕೌಶಲ ಆಧಾರಿತ ತರಬೇತಿ ನೀಡಲಿವೆ ರಾಜ್ಯದ 3ಸಂಸ್ಥೆ

01:54 AM Jun 26, 2021 | Team Udayavani |

ಮಂಗಳೂರು : ಯುವಜನತೆಗೆ ವೃತ್ತಿಕೌಶಲ ತರಬೇತಿ ನೀಡಿ ಉದ್ಯೋಗ ಅವಕಾಶ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಮಂಗಳೂರು ಸಹಿತ ದೇಶಾದ್ಯಂತ 19 ಕೈಗಾರಿಕಾ ಕ್ಲಸ್ಟರ್‌ಗಳನ್ನು “ಸ್ಟ್ರೈವ್‌’ ಯೋಜನೆಗೆ ಆಯ್ಕೆ ಮಾಡಿದ್ದು, ಅಂತಿಮ ಹಂತದ ಅನುಮತಿ ಪ್ರಕ್ರಿಯೆ ನಡೆಯುತ್ತಿದೆ.

Advertisement

ರಾಜ್ಯದಲ್ಲಿ 3 ಕ್ಲಸ್ಟರ್‌  ಆಯ್ಕೆಯ ಅಂತಿಮ ಹಂತದಲ್ಲಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಕ್ಲಸ್ಟರ್‌ ಮತ್ತು ಬೀದರ್‌ನ ಆಟೊಮೊಬೈಲ್‌ ಕ್ಲಸ್ಟರ್‌ ಸೇರಿವೆ. ಮಂಗಳೂರಿನದು “ಮಿಶ್ರ ಕ್ಲಸ್ಟರ್‌’ ಆಗಿದ್ದು, ಕೆನರಾ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ಇದನ್ನು ಪ್ರತಿನಿಧಿಸುತ್ತಿದೆ.

ಒಂದೆಡೆ ಕೈಗಾರಿಕೆಗಳಿಗೆ ಕೌಶಲಯುತ ಉದ್ಯೋಗಿಗಳ ಅಗತ್ಯವಿದೆ. ಇನ್ನೊಂದೆಡೆ ಅಧಿಕ ಸಂಖ್ಯೆಯ ಯುವಜನತೆ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಇವೆರಡನ್ನೂ ಸಾಧಿಸಲು ಕೇಂದ್ರ ಸರಕಾರ “ಸ್ಟ್ರೈವ್‌’ (ಸ್ಕಿಲ್‌ ಸ್ಟ್ರೆಂಥನಿಂಗ್‌ ಫಾರ್‌ ಇಂಡಸ್ಟ್ರಿಯಲ್‌ ವ್ಯಾಲ್ಯೂ ಎನ್‌ಹ್ಯಾನ್ಸ್‌ ಮೆಂಟ್‌) ಪ್ರಾಜೆಕ್ಟ್ ಅನುಷ್ಠಾನಗೊಳಿಸುತ್ತಿದೆ. ಕೈಗಾರಿಕೆಗಳನ್ನು ಪ್ರತಿನಿಧಿಸುವ ಸಂಸ್ಥೆಗಳ ಮೂಲಕ ಇದನ್ನು ಅನುಷ್ಠಾನಕ್ಕೆ ತಂದರೆ ಪರಿಣಾಮಕಾರಿಯಾಗಬಹುದು ಎಂಬ ಚಿಂತನೆ ಸರಕಾರದ್ದು.

ಒಂದು ಕೋಟಿ ರೂ. ಅನುದಾನ
ಅಂತಿಮವಾಗಿ ಆಯ್ಕೆಯಾದ ಕ್ಲಸ್ಟರ್‌ಗೆ ಸಾಧನೆಯ ಆಧಾರದಲ್ಲಿ 1 ಕೋ.ರೂ. ಅನುದಾನ ದೊರೆಯಲಿದೆ. ಇದನ್ನು ಅಪ್ರಂಟಿಶಿಪ್‌ ತರಬೇತಿ, ಕೌಶಲ ತರಬೇತಿ ಮತ್ತು ಇದಕ್ಕೆ ಪೂರಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ವಿನಿಯೋಗಿಸಬೇಕಾಗಿದೆ.

5 ಕೋರ್ಸ್‌ ಸಿದ್ಧ
“ಸ್ಟ್ರೈವ್‌’ ಪ್ರಾಜೆಕ್ಟ್‌ನಡಿ ಮಂಗಳೂರಿನಲ್ಲಿ ಅತ್ಯಾಧುನಿಕ ಕೌಶಲಗಳನ್ನು ಒಳಗೊಂಡ ಫಿಟ್ಟರ್‌, ಎಲೆಕ್ಟ್ರೀಶಿಯನ್‌, ವೆಲ್ಡರ್‌, ಮೋಟಾರ್‌ ವೆಹಿಕಲ್‌ ಮೆಕ್ಯಾನಿಕ್‌, ಪಾಸಾ (ಪ್ರೋಗ್ರಾಮಿಂಗ್‌ ಆ್ಯಂಡ್‌ ಸಿಸ್ಟಮ್‌) ಕೋರ್ಸ್‌ಗಳನ್ನು ಸಿದ್ಧಪಡಿಸಲಾಗಿದ್ದು, ಕೇಂದ್ರ ಕೌಶಲಾಭಿವೃದ್ಧಿಯಿಂದ ಅನುಮತಿ ದೊರೆಯಬೇಕಿದೆ. ಇದರಲ್ಲಿ ಮಹಿಳೆಯರಿಗೆ ಕನಿಷ್ಠ ಶೇ. 15ರಷ್ಟು ಸೀಟುಗಳನ್ನು ಮೀಸಲಿಡಬೇಕಿದೆ. ಐಟಿಐ ಶಿಕ್ಷಣ ಪಡೆದವರು ಮಾತ್ರವಲ್ಲದೆ ಪಡೆಯದವರು ಕೂಡ ಈ ತರಬೇತಿ ಪಡೆಯಬಹುದಾಗಿದೆ. ಆಯಾ
ಕೋರ್ಸ್‌ಗೆ ಅನ್ವಯಿಸಿ ಕನಿಷ್ಠ ವಿದ್ಯಾಭ್ಯಾಸ ನಿಗದಿಗೊಳಿಸಲಾಗುತ್ತದೆ “ಸ್ಟ್ರೈವ್‌’ ಪ್ರಾಜೆಕ್ಟ್ಗೆ ಆಯ್ಕೆಯಾಗಿರುವ ದೇಶದ 19 ಇಂಡಸ್ಟ್ರಿ ಕ್ಲಸ್ಟರ್‌ಗಳಲ್ಲಿ ನಮ್ಮ ಸಂಸ್ಥೆಯೂ ಒಂದಾಗಿರುವುದು ಸಂತಸ ತಂದಿದೆ. ಅಂತಿಮ ಹಂತದ ಆಯ್ಕೆ ಪ್ರಕ್ರಿಯೆ ನಡೆಯು
ತ್ತಿದ್ದು, ಮುಂದಿನ ತಿಂಗಳಿನಿಂದ ತರಬೇತಿಗೆ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ ಎಂದು ಕೆನರಾ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ಅಧ್ಯಕ್ಷ ಅಜಿತ್‌ ಕಾಮತ್‌ ಹೇಳಿದರು.

Advertisement

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next