ಮಂಗಳೂರು: ಮಂಗಳೂರಿನಿಂದ ಮಣಿಪಾಲ ನಡುವೆ ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಕೆಎಸ್ಸಾರ್ಟಿಸಿ ವೋಲ್ವೊ ಬಸ್ ಸಂಚಾರ ಮತ್ತೆ ಆರಂಭಗೊಂಡಿದೆ.
ಈ ಹಿಂದೆ ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ 4 ವೋಲ್ವೋ ಬಸ್‌ಗಳು ಸಂಚರಿಸುತ್ತಿದ್ದವು. ಪ್ರಸ್ತುತ ವಿಮಾನ ನಿಲ್ದಾಣದ ರನ್‌ವೇ ಕಾಮಗಾರಿ ಹಿನ್ನೆಲೆಯಲ್ಲಿ ವಿಮಾನಗಳ ಆಗಮಿಸುವಿಕೆಯಲ್ಲಿ ವ್ಯತ್ಯಯವಾಗುತ್ತಿದೆ. ಪರಿಣಾಮ ಅಲ್ಲಿಗೆ ಸಂಚರಿಸುವ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದೀಗ ಆ ಬಸ್ ಟ್ರಿಪ್‌ಗ್ಳನ್ನು ರದ್ದುಗೊಳಿಸಿ ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲಕ್ಕೆ ಕಾರ್ಯಾಚರಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ.
ಸ್ಟೇಟ್‌ಬ್ಯಾಂಕ್ -ಮಣಿಪಾಲ ನಡುವಣ ಕೋವಿಡ್‌ಗೂ ಹಿಂದೆ 10 ಹವಾನಿಯಂತ್ರಿತ ಬಸ್‌ಗಳು 25 ಶೆಡ್ನೂಲ್‌ಗಳಲ್ಲಿ ಕಾರ್ಯಾಚರಿಸುತ್ತಿದ್ದವು. ಉಡುಪಿ, ಮಣಿಪಾಲ ಸೇರಿದಂತೆ ಸುತ್ತಮುತ್ತಲಿನ ಭಾಗಕ್ಕೆ ಸಂಚರಿಸುವ ಹೆಚ್ಚಿನ ಮಂದಿ ಇದೇ ಬಸ್ ಅವಲಂಬಿಸಿದ್ದರು. ಬೆಳಗ್ಗೆ, ಸಂಜೆ ಸೀಟುಗಳು ಕೂಡ ಭರ್ತಿಯಾಗುತ್ತಿತ್ತು. ಆದರೆ ಬಸ್‌ಗಳ ನಿರ್ವಹಣೆ, ಉತ್ತಮ ಇಲ್ಲದ ಕಾರಣ ಮೈಲೇಜ್ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಬಸ್ ಸಂಚಾರವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಈ ರೂಟ್‌ನಲ್ಲಿ ಹೊಸ ವೋಲ್ವೋ ಆರಂಭಗೊಂಡಿಲ್ಲ. ಇದೀಗ ಮತ್ತೆ ಆರಂಭಗೊಳಿಸಲಾಗಿದ್ದು, ಪ್ರಯಾಣಿಕರ ನಿರೀಕ್ಷೆಯಲ್ಲಿದೆ ಕೆಎಸ್ಸಾರ್ಟಿಸಿ.
ಸಂಚಾರ ವಿವರ
ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲಕ್ಕೆ: ಬೆಳಗ್ಗೆ 7.30, ಬೆ.9.30, ಬೆ. 11.30, ಅಪರಾಹ್ನ 3.15, ಸಂಜೆ 5
ಮಣಿಪಾಲದಿಂದ ಸ್ಟೇಟ್‌ಬ್ಯಾಂಕ್‌ಗೆ: ಬೆಳಗ್ಗೆ 7.30, ಬೆ.9.30, ಮಧ್ಯಾಹ್ನ 1.15, ಅಪರಾಹ್ನ 3, ಸಂಜೆ 5