Advertisement

ಇಂದು ರಾಜ್ಯ ಕ್ರೀಡಾ ಪ್ರಶಸ್ತಿ ಪ್ರದಾನ

11:18 PM Dec 05, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರದಿಂದ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2022-23ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ 15, ಕ್ರೀಡಾರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆಗೆ 6, ಕ್ರೀಡಾಪೋಷಕ ಸಂಸ್ಥೆಗಳ ಪ್ರಶಸ್ತಿಗೆ 3 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

Advertisement

ಕ್ರೀಡಾಪೋಷಕ ಸಂಸ್ಥೆ ಪ್ರಶಸ್ತಿಗೆ ಮಂಗಳೂರಿನ ಮಂಗಳ ಫ್ರೆಂಡ್ಸ್‌ ಸರ್ಕಲ್‌, ನಿಟ್ಟೆ ಎಜುಕೇಶನ್‌ ಟ್ರಸ್ಟ್‌ ಆಯ್ಕೆ ಆಗಿದೆ.

ಪ್ರಶಸ್ತಿಗಳನ್ನು ಮಂಗಳವಾರ ಬೆಳಗ್ಗೆ ರಾಜ ಭವನದಲ್ಲಿ ಪ್ರದಾನ ಮಾಡಲಾಗುವುದು. ರಾಜ್ಯಪಾಲರಾದ ಥಾವರಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣ ಗೌಡ ತಿಳಿಸಿದ್ದಾರೆ.

ಏಕಲವ್ಯ ಪ್ರಶಸ್ತಿ: ಬಿ. ಚೇತನ್‌ (ಆ್ಯತ್ಲೆಟಿಕ್ಸ್‌), ಶಿಖಾ ಗೌತಮ್‌ (ಬ್ಯಾಡ್ಮಿಂಟನ್‌), ಕೀರ್ತಿ ರಂಗಸ್ವಾಮಿ (ಸೈಕ್ಲಿಂಗ್‌), ಅದಿತ್ರಿ ಪಾಟೀಲ್‌ (ಫೆನ್ಸಿಂಗ್‌), ಅಮೃತ್‌ ಮುದ್ರಾಬೆಟ್‌ (ಜಿಮ್ನಾಸ್ಟಿಕ್ಸ್‌), ಶೇಷೇಗೌಡ (ಹಾಕಿ), ರೇಷ್ಮಾ ಮರೂರಿ (ಲಾನ್‌ ಟೆನಿಸ್‌), ಟಿ.ಜೆ. ಶ್ರೀಜಯ್‌ (ಶೂಟಿಂಗ್‌), ತನೀಷ್‌ ಜಾರ್ಜ್‌ ಮ್ಯಾಥ್ಯೂ (ಈಜು), ಯಶಸ್ವಿನಿ ಘೋರ್ಪಡೆ (ಟೇಬಲ್‌ ಟೆನಿಸ್‌), ಹರಿಪ್ರಸಾದ್‌ (ವಾಲಿಬಾಲ್‌), ಸೂರಜ್‌ ಸಂಜು ಅಣ್ಣಿಕೇರಿ (ಕುಸ್ತಿ), ಎಚ್‌.ಎಸ್‌. ಸಾಕ್ಷತ್‌ (ನೆಟ್‌ಬಾಲ್‌), ಬಿ.ಎಂ. ಮನೋಜ್‌ (ಬಾಸ್ಕೆಟ್‌ಬಾಲ್‌), ಎಂ. ರಾಘವೇಂದ್ರ (ಪ್ಯಾರಾ ಆ್ಯತ್ಲೆಟಿಕ್ಸ್‌).

ಕ್ರೀಡಾರತ್ನ ಪ್ರಶಸ್ತಿ: ಎಂ.ಎಂ. ಕವನಾ (ಬಾಲ್‌ ಬ್ಯಾಡ್ಮಿಂಟನ್‌), ಬಿ. ಗಜೇಂದ್ರ (ಗುಂಡು ಎತ್ತುವುದು), ಶ್ರೀಧರ್‌(ಕಂಬಳ), ರಮೇಶ ಮಳವಾಡ (ಖೋಖೋ), ವೀರಭದ್ರ ಮುಧೋಳ (ಮಲ್ಲಕಂಬ), ಎಚ್‌. ಖುಷಿ (ಯೋಗ), ಲೀನಾ ಆಂತೋಣಿ ಸಿದ್ದಿ ಮಟ್ಟಿ (ಕುಸ್ತಿ), ದರ್ಶನ್‌ (ಕಬಡ್ಡಿ).

Advertisement

ಜೀವಮಾನ ಸಾಧನೆ: ಅಲ್ಕಾ ಎನ್‌. ಪಡುತಾರೆ (ಸೈಕ್ಲಿಂಗ್‌), ಬಿ. ಆನಂದಕುಮಾರ್‌ (ಪ್ಯಾರಾ ಬ್ಯಾಡ್ಮಿಂಟನ್‌), ಶೇಖರಪ್ಪ (ಯೋಗ), ಕೆ.ಸಿ. ಅಶೋಕ್‌ (ವಾಲಿಬಾಲ್‌), ರವೀಂದ್ರ ಶೆಟ್ಟಿ (ಕಬಡ್ಡಿ), ಬಿ.ಜೆ. ಅಮರನಾಥ್‌ (ಯೋಗ).
ಗುಜರಾತ್‌ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕರ್ನಾಟಕದ 136 ಕ್ರೀಡಾಪಟುಗಳು ವಿವಿಧ ಪದಕಗಳನ್ನು ಗೆದ್ದಿದ್ದಾರೆ. ಇಲ್ಲಿ ಚಿನ್ನ ಗೆದ್ದವರಿಗೆ 5 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 3 ಲಕ್ಷ ರೂ., ಕಂಚು ವಿಜೇತರಿಗೆ 2 ಲಕ್ಷ ರೂ. ನಗದು ನೀಡಲಾ ಗುತ್ತದೆ.

ಪ್ರಶಸ್ತಿ ಮೊತ್ತ ಎಷ್ಟು?
ಏಕಲವ್ಯ ಪ್ರಶಸ್ತಿ 1992ರಲ್ಲಿ ಆರಂಭವಾಗಿದೆ. ಇದು ಕಂಚಿನ ಪ್ರತಿಮೆ ಹಾಗೂ 2 ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಜೀವಮಾನ ಸಾಧನೆ ಪ್ರಶಸ್ತಿಯು, ಪ್ರಶಸ್ತಿ ಫ‌ಲಕ, 1.50 ಲಕ್ಷ ರೂ. ನಗದನ್ನು ಹೊಂದಿರುತ್ತದೆ. 2014ರಿಂದ ಕ್ರೀಡಾರತ್ನ ಪ್ರಶಸ್ತಿ ಆರಂಭವಾಯಿತು. ಗ್ರಾಮೀಣ ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ಇದನ್ನು ನೀಡಲಾಗುತ್ತಿದೆ. ಇದು ಪ್ರಶಸ್ತಿ ಫ‌ಲಕ, 1 ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಕ್ರೀಡೆಯನ್ನು ಬೆಳೆಸಿ, ಪ್ರೋತ್ಸಾಹಿಸುತ್ತಿರುವ ಸಂಸ್ಥೆಗಳಿಗೆ ಕ್ರೀಡಾಪೋಷಕ ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕೆ ಅರ್ಹರಾದ ಸಂಸ್ಥೆಗಳಿಗೆ ಪ್ರಶಸ್ತಿ ಪತ್ರದ ಜತೆಗೆ 5 ಲಕ್ಷ ರೂ. ನಗದು ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next