Advertisement

ಶಿವರಾಜ ತಂಗಡಗಿ ಸಭ್ಯರೇ? ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಪ್ರಶ್ನೆ

01:18 PM Jan 18, 2024 | Team Udayavani |

ಕುಷ್ಟಗಿ: ಕೆನರಾ ಸಂಸದ ಅನಂತಕುಮಾರ್ ಹೆಗಡೆ ಅವರು ಏಕವಚನ ಹೇಳಿಕೆ ತಪ್ಪು, ಪ್ರತಿಕಾರವಾಗಿ ಸಚಿವ ಶಿವರಾಜ್ ತಂಗಡಗಿಯವರು ಮಾತನಾಡಿರುವುದು ಕೂಡ ತಪ್ಪು. ರಾಜಕಾರಣದಲ್ಲಿ ಏಕವಚನ ಪ್ರಯೋಗ ಪುನರಾವರ್ತಿತ ಆಗಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

Advertisement

ಕುಷ್ಟಗಿ ಪಟ್ಟಣದ ಗೌಡ್ರು ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ನೆರವೇರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ವಿಚಾರವಾಗಿ ನಿನ್ನೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಹ ಯಾರೇ ಮಾತನಾಡಿದರೂ ತಪ್ಪು ಎಂದಿದ್ದಾರೆ.

ಸಚಿವ ಶಿವರಾಜ ತಂಗಡಗಿ ಅವರೇನು ಸಭ್ಯರಲ್ಲ. ಅವರು   ಅನೇಕ ಬಾರಿ  ಬೇರೆ ಬೇರೆ ವಿಚಾರಗಳಲ್ಲಿ ನಾಲಿಗೆ ಹರಿ ಬಿಟ್ಟಿದ್ದಾರೆ. ಅವರೂ ಇನ್ಮುಂದೆ ಇದೇ ರೀತಿ ನಾಲಿಗೆಯನ್ನು ಹತೋಟಿಗೆ ಇಡದೇ ಇದ್ದಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೊಪ್ಪಳ ಜಿಲ್ಲಾ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ನವೀನ್ ಗುಳುಗಣ್ಣವರ ಈಗತಾನೆ ಅವರು ನೇಮಕವಾಗಿದ್ದಾರೆ. ಅವರ ಕಾರ್ಯಚೆಟುವಟಿಗೆ ಮುಂದೆ ಗೊತ್ತಾಗಲಿದೆ ಎಂದರು.

ಸಂಸದ ಸಂಗಣ್ಣ ಕರಡಿ ಅವರು ಕ್ಷೇತ್ರದಲ್ಲಿ ಉತ್ತಮವಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರಿಗೆ ಮತ್ತೊಮ್ಮೆ ಲೋಕಸಭಾ ಟಿಕೇಟ್ ದೊರೆಯಬೇಕು ಎಂದು ಬಿಜೆಪಿ ಕಾರ್ಯಕರ್ತರ ಒತ್ತಾಯವಾಗಿದೆ. ಜೊತೆಗೆ ಟಿಕೇಟಿಗಾಗಿ ಪಕ್ಷದಲ್ಲಿ ಪೈಪೋಟಿ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಸಕ ದೊಡ್ಡನಗೌಡರು, ಲೋಕಸಭಾ ಟೀಕೇಟ್ ಯಾರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲಾ ಚುನಾವಣೆಯಲ್ಲಿ ಪೈಪೋಟಿ ಇರುವುದು ಸಹಜ ತಮಗೂ ಪೈಪೋಟಿ ಇದ್ದಾಗ ಸಂಸದ ಸಂಗಣ್ಣ ಕರಡಿ ಅವರು ನನ್ನ ಜೊತೆಗಿದ್ದರು ಎಂದು ಹೇಳಿದರು.

Advertisement

ಶ್ರೀ ರಾಮ ಮಂದಿರ ಅಸಂಖ್ಯಾ ಭಾರತೀಯರ ಕನಸು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಅನೇಕ ಜನರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಅನೇಕ ಜನ ಕರಸೇವಕರು ಮನೆಮಠಗಳನ್ನು ತ್ಯಜಿಸಿರುವುದನ್ನು ಕಂಡಿದ್ದೇವೆ. ಅವರೆಲ್ಲರ ಕನಸು ಈಡೇರಿದೆ. ಪಕ್ಷದ ಹಿರಿಯ ನೇತಾರ ಉಪ ಪ್ರಧಾನಿ ಲಾಲಕೃಷ್ಣ ಅಡ್ವಾಣಿ ಅವರ ಹೇಳಿಕೆಯಂತೆ ರಾಮಭಕ್ತ ನರೇಂದ್ರ ಮೋದಿ ಅವರನ್ನೇ ಶ್ರೀರಾಮ ಕರೆಯಿಸಿದ್ದಾನೆ ಮೋದಿ ಅವರ ಪ್ರಯತ್ನದ ಫಲವಾಗಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಅನೇಕ ಜನ ಭಾರತೀಯರ ಕನಸು ಜ.22 ರಂದು ಈಡೇರುತ್ತಿದೆ ಎಂದು ಹೇಳಿದರು.

ಈ ವೇಳೆ ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ಪುರಸಭೆ ಸದಸ್ಯರಾದ ಬಸವರಾಜ ಬುಡಕುಂಟಿ, ಜಯತೀರ್ಥ ಆಚಾರ್ಯ, ಮುಖಂಡರಾದ ವಿಜಯಕುಮಾರ ಹಿರೇಮಠ, ವೀರಣ್ಣ ಸೊಬರದ, ಮಲ್ಲಿಕಾರ್ಜುನ ಮಸೂತಿ, ಶಶಿಧರ ಕವಲಿ, ಕಾರ್ಯದರ್ಶಿ ಚಂದ್ರಕಾಂತ ವಡಿಗೇರಿ, ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ ಸೇರಿದಂತೆ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next