Advertisement
ಕೋವಿಡ್-19 ಹೆಚ್ಚು ದಾಖಲಾಗುತ್ತಿ ರುವ ಪ್ರದೇಶಗಳಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ಸೀಲ್‌ಡೌನ್ ಮಾಡುತ್ತಿ ದ್ದಾರೆ. ಮನೆಗಳಿಂದ ಹೊರಬೀಳುವು ದನ್ನು ಕಡಿಮೆ ಮಾಡುತ್ತಿದ್ದಾರೆ. ಹೊರಗಿನವರು ಬಾರದಂತೆ ಕಾವಲು ಕಾಯುತ್ತಿದ್ದಾರೆ. ಬೆಂಗಳೂರು, ಕನಕ ಪುರ ಸೇರಿದಂತೆ ಹಲವು ಕಡೆಗಳಲ್ಲಿ ಇಂಥ ಬೆಳವಣಿಗೆ ಕಂಡುಬರುತ್ತಿದೆ.
ರಾಜ್ಯದಲ್ಲಿ ಕೋವಿಡ್-19 ಸೋಂಕುಪೀಡಿತರ ಸಂಖ್ಯೆ 9 ಸಾವಿರ ದಾಟಿದೆ. ರವಿವಾರ ಮತ್ತೆ 453 ಪ್ರಕರಣಗಳು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಸದ್ಯ 3,391 ಸಕ್ರಿಯ ಪ್ರಕರಣಗಳಿದ್ದು, 5,618 ಮಂದಿ ಗುಣಮುಖರಾಗಿದ್ದಾರೆ. ಅತ್ಯಂತ ಆಘಾತಕಾರಿ ಅಂಶವೆಂದರೆ, ರಾಜಧಾನಿ ಬೆಂಗಳೂರಿನಲ್ಲೇ ರವಿವಾರವೇ 196 ಪ್ರಕರಣಗಳು ಕಾಣಿಸಿಕೊಂಡಿವೆ.
Related Articles
ದೇಶಾದ್ಯಂತ ಜೂನ್ 8ರಿಂದ ಲಾಕ್‌ಡೌನ್ ತೆರವಾದರೆ ರಾಜ್ಯವು ಮೇ 18ರಿಂದಲೇ ನಿರ್ಬಂಧಗಳಿಂದ ತೆರವಾಗಿದೆ. ಆ ಬಳಿಕ ಸೋಂಕುಪೀಡಿತರ ಸಂಖ್ಯೆ ಕೈಮೀರುತ್ತಿದೆ. ರವಿವಾರ 453 ಪ್ರಕರಣಗಳು ದೃಢಪಟ್ಟಿದ್ದು, ಜೂ.1ರಿಂದ ಇದುವರೆಗೆ ಅಂದರೆ ಕೇವಲ 20 ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಪ್ರತೀ ದಿನ ಸರಾಸರಿ 300 ಪ್ರಕರಣಗಳು ದಾಖಲಾಗಿದ್ದು, ನಿತ್ಯ 4ರಿಂದ 5 ಜನರು ಸಾವನ್ನಪ್ಪಿದ್ದಾರೆ.
Advertisement
15 ಸಾವಿರ ಹೆಚ್ಚಳಹೊಸದಿಲ್ಲಿ: ದೇಶದ ಮಟ್ಟದಲ್ಲಿ ಶನಿವಾರ ಬೆಳಗ್ಗೆಯಿಂದ ರವಿವಾರ ಬೆಳಗ್ಗೆ 8 ಗಂಟೆಯ ವರೆಗೆ ಸೋಂಕುಪೀಡಿತರ ಸಂಖ್ಯೆ 15 ಸಾವಿರ ದಷ್ಟು ಹೆಚ್ಚಳವಾಗಿದೆ. ಇತ್ತೀಚೆಗೆ ದಿನವೂ 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ತೀರಾ ಆತಂಕ ಉಂಟು ಮಾಡಿದೆ. ಈ ಮೊದಲು ಸೋಂಕುಪೀಡಿತ ಪ್ರಕರಣಗಳಲ್ಲಿ ಶೇ. 90ರಷ್ಟು ಹೊರಗಿನಿಂದ ಬಂದವರೇ ಆಗಿದ್ದರು. ಆದರೆ ಕಳೆದ ಒಂದು ವಾರದಿಂದ ಈ ವಲಸಿಗರಲ್ಲಿ ಸೋಂಕಿನ ಪ್ರಮಾಣ ಶೇ. 25ರಿಂದ 30ಕ್ಕೆ ಇಳಿಕೆಯಾಗಿದ್ದು, ಸ್ಥಳೀಯರಲ್ಲಿ ಸೋಂಕು ವ್ಯಾಪಿಸಿದೆ. ಜತೆಗೆ ಸೋಂಕುಪೀಡಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.