Advertisement

ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ: “ಕಂತು’ಗೆ ಪ್ರಥಮ ಪ್ರಶಸ್ತಿ

02:26 AM Jan 18, 2021 | Team Udayavani |

ಉಡುಪಿ: ಉಡುಪಿ ರಂಗಭೂಮಿ ವತಿಯಿಂದ ಹಮ್ಮಿಕೊಳ್ಳಲಾದ 41ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ-2020ರ ಪ್ರಥಮ ಬಹುಮಾನವನ್ನು ಬೆಂಗಳೂರಿನ ಸಮಷ್ಠಿ ತಂಡದ “ಕಂತು’ ನಾಟಕ ಪಡೆದುಕೊಂಡಿದೆ.

Advertisement

ಈ ತಂಡವು ಪಿ.ವಿ.ಎಸ್‌. ಬೀಡೀಸ್‌ ಪ್ರಾಯೋಜಿತ ದಿ| ಪುತ್ತು ವೈಕುಂಠ ಶೇಟ್‌ ಸ್ಮಾರಕ ಪ್ರಥಮ ನಗದು ಬಹುಮಾನ 35 ಸಾವಿರ ರೂ. ಮತ್ತು ಸ್ಮರಣಿಕೆ ಹಾಗೂ ಡಾ| ಟಿಎಂಎ ಪೈ ಸ್ಮಾರಕ ಪರ್ಯಾಯ ಫ‌ಲಕವನ್ನು ಸತತವಾಗಿ 3ನೇ ಬಾರಿಗೆ ತನ್ನದಾಗಿಸಿಕೊಂಡಿದೆ.

ದ್ವಿತೀಯ ಬಹುಮಾನವಾದ ದಿ| ಮಲ್ಪೆ ಮಧ್ವರಾಜ್‌ ಸ್ಮಾರಕ ಪ್ರಮೋದ್‌ ಮಧ್ವರಾಜ್‌ ಕೊಡುಗೆಯಾದ 25 ಸಾವಿರ ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ| ಆರ್‌.ಪಿ. ಕೊಪ್ಪೀಕರ್‌ ಸ್ಮಾರಕ ಬಹುಮಾನವು ಧಾರವಾಡ ಸಮುದಾಯ ತಂಡದ “ತಲೆದಂಡ’ ನಾಟಕಕ್ಕೆ ಲಭಿಸಿದೆ.

ಉಡುಪಿ ಸುಮನಸ ಕೊಡವೂರು ತಂಡದ “ನೆರಳಿಲ್ಲದ ಮನುಷ್ಯರು’ ನಾಟಕ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದು, ದಿ| ಪಿ. ವಾಸುದೇವ ರಾವ್‌ ಸ್ಮರಣಾರ್ಥ ಸೀತಾ ವಾಸುದೇವ ರಾವ್‌ ಕೊಡುಗೆಯಾದ 15 ಸಾವಿರ ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ದೊರೆತಿದೆ.

ಬಹುಮಾನಗಳ ವಿವರ :

Advertisement

ಶ್ರೇಷ್ಠ ನಿರ್ದೇಶನ: ಪ್ರಥಮ – ಮಂಜುನಾಥ ಎಲ್‌. ಬಡಿಗೇರ (“ಕಂತು’ ನಾಟಕ), ದ್ವಿತೀಯ – ಮಹದೇವ ಹಡಪದ (ತಲೆದಂಡ), ತೃತೀಯ – ಜೆ. ಜೋಸೆಫ್ (ನೆರಳಿಲ್ಲದ ಮನುಷ್ಯರು).

ಶ್ರೇಷ್ಠ ನಟ: ಪ್ರ – ಈರಣ್ಣ ಐನಾಪುರ (ತಲೆದಂಡ-ಬಿಜ್ಜಳ ಪಾತ್ರಧಾರಿ), ದ್ವಿ – ಪರಮೇಶ್ವರ್‌ ಕೆ. (ಕಂತು – ಸದಾನಂದ ಮಾಸ್ತರ್‌ ಪಾತ್ರಧಾರಿ), ತೃ: ಹರಿ ಸಮಷ್ಠಿ (ಕಂತು- ಪಾಂಡುರಂಗರಾಯ ಪಾತ್ರಧಾರಿ).

ಶ್ರೇಷ್ಠ ನಟಿ:  ಪ್ರ – ಸೌಮ್ಯಶ್ರೀ ಮಾರ್ನಾಡ್‌ (ಕಂತು – ಕಾವೇರಿ ಪಾತ್ರಧಾರಿ), ದ್ವಿ-ರಾಧಿಕಾ ದಿವಾಕರ್‌ (ನೆರಳಿಲ್ಲದ ಮನುಷ್ಯರು-ಅಜಿತ ಪಾತ್ರಧಾರಿ), ತೃ-ಕಿರಣಾ (ಕಂತು-ಸರಸ್ವತಿ/ಕಾತ್ಯಾಯಿನಿ ಪಾತ್ರಧಾರಿ).

ಶ್ರೇಷ್ಠ ಸಂಗೀತ: ಪ್ರ-ಮೈಸೂರು ಜಿಪಿಐಇಆರ್‌ ರಂಗತಂಡದ “ಮಂಟೇ ಸ್ವಾಮಿ ಕಥಾ ಪ್ರಸಂಗ’ ನಾಟಕ, ದ್ವಿ- ಕಂತು, ತೃ- ತಲೆದಂಡ.

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರ-ಕಂತು, ದ್ವಿ- ತಲೆದಂಡ, ತೃ-ನೆರಳಿಲ್ಲದ ಮನುಷ್ಯರು.

ಶ್ರೇಷ್ಠ ಪ್ರಸಾಧನ: ಪ್ರ- ಕಂತು, ದ್ವಿ- ತಲೆದಂಡ, ತೃ- ಮಂಟೇಸ್ವಾಮಿ ಕಥಾ ಪ್ರಸಂಗ.

ಶ್ರೇಷ್ಠ ರಂಗಬೆಳಕು: ಪ್ರ     -ಕಂತು, ದ್ವಿ- ನೆರಳಿಲ್ಲದ ಮನುಷ್ಯರು, ತೃ- ತಲೆದಂಡ.

ಶ್ರೇಷ್ಠ ಹಾಸ್ಯ ನಟನೆ: ಪ್ರ-ಹರೀಶ್‌ ರುದ್ರಯ್ಯ (ಕಂತು-ಬುಗುರಿ ಪಾತ್ರಧಾರಿ).

ಮೆಚ್ಚುಗೆ ಬಹುಮಾನಗಳು: ಕಂತು ನಾಟಕದ ತರ್ಕಶಾಸಿŒ ಪಾತ್ರಧಾರಿ ಶಿವಾನಂದ ಜಿ.ಕೆ., ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕದ ಮಂಟೇಸ್ವಾಮಿ ಪಾತ್ರಧಾರಿ ನವೀನ್‌ ನೇತಾಜಿ, ನೆರಳಿಲ್ಲದ ಮನುಷ್ಯರು ನಾಟಕದ ಕುಂಟಿಯಾ ಪಾತ್ರಧಾರಿ ದಿವಾಕರ್‌ ಕಟೀಲು.

ಪ್ರೊ| ವಸಂತ ಬನ್ನಾಡಿ, ಚಂದ್ರಹಾಸ ಉಳ್ಳಾಲ, ಬೆಳಗೋಡು ರಮೇಶ್‌ ಭಟ್‌, ಪ್ರತಿಭಾ ಎಂ.ವಿ., ಗಣೇಶ್‌ ಮಂದಾರ್ತಿ ತೀರ್ಪುಗಾರರಾಗಿದ್ದರು. ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 13 ಮತ್ತು ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ಫೆ. 14ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ “ಕಂತು’ ನಾಟಕ ಮರು ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next