Advertisement

ರಾಜ್ಯ ಮಟ್ಟದ ಫುಟ್ಬಾಲ್‌: ಅರ್ನವ್‌ ಶೆಟ್ಟಿ ಸಾಧನೆ

04:50 PM Nov 27, 2018 | Team Udayavani |

ಮುಂಬಯಿ: ನಾಸಿಕ್‌ನ  ಡಿವಿಜನಲ್‌ ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ಫುಟ್ಬಾಲ್‌ ಅಸೋಸಿಯೇಶನ್‌ ನಾಸಿಕ್‌ ಮತ್ತು ಕೆಎನ್‌ಡಿ ಮಂಡಲದ ಜಂಟಿ ಆಯೋಜನೆಯಲ್ಲಿ ನಡೆದ ಸಬ್‌ ಜೂನಿಯರ್‌ ಗ್ರೂಪ್‌ ಮಹಾರಾಷ್ಟ್ರ ರಾಜ್ಯಮಟ್ಟದ  ಫ‌ುಟ್ಬಾಲ್‌ ಸ್ಪರ್ಧೆಯಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಪಾಲ^ರ್‌ ತಂಡವು ಪ್ರಥಮ ಸ್ಥಾನ ಪಡೆದಿದೆ.

Advertisement

22 ತಂಡಗಳು ಭಾಗವಹಿಸಿದ ಈ ಟೂರ್ನಿಯಲ್ಲಿ ಪುಣೆ ತಂಡವನ್ನು 1-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ತಂಡದಲ್ಲಿ ಜಯದಲ್ಲಿ ಅರ್ನವ್‌ ಶೆಟ್ಟಿ ಅವರು ಪ್ರಮುಖ ಪಾತ್ರ ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ಕಾಂದಿವಲಿಯ ಠಾಕೂರ್‌ ವಿದ್ಯಾಮಂದಿರದ ಐದನೇ ತರಗತಿಯ ವಿದ್ಯಾರ್ಥಿಯಾಗಿರುವ ಅರ್ನವ್‌ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಇವರು ಕಾಂದಿವಲಿಯ ನಿವಾಸಿಗಳಾದ ಮೂಲತಃ ಸಾಣೂರು ಗುರುಬೆಟ್ಟು ವಸಂತ್‌ ಶೆಟ್ಟಿ ಮತ್ತು ತಾಳಿಪಾಡಿ ಆಡ್ರಗುತ್ತು ಶೀತಲ್‌ ಶೆಟ್ಟಿ ದಂಪತಿಯ  ಪುತ್ರ.
 

Advertisement

Udayavani is now on Telegram. Click here to join our channel and stay updated with the latest news.

Next