Advertisement
ಉದ್ದೇಶಿತ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆಯ ಜನವಿರೋಧಿ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯಮಟ್ಟದ ಸೈಕಲ್ ಜಾಥಾ ಅಭಿಯಾನಕ್ಕೆ ನಗರದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಭ್ರಷ್ಟಾಚಾರವನ್ನು ನಿಯಂತ್ರಿಸಲು ಸೂಕ್ತ ಕಾಯ್ದೆ- ಕಾನೂನುಗಳಿರುವಾಗ ಅದನ್ನು ಸಮರ್ಥವಾಗಿ ಬಳಸುವ ಬದಲು ಎಂಸಿಐ ವಿಸರ್ಜಿಸಲು ಶಿಫಾರಸು ಮಾಡಿರುವುದು ಸರಿಯಲ್ಲ. ಉದ್ದೇಶಿತ ಮಸೂದೆ ಜನಾರೋಗ್ಯಕ್ಕೆ ಮಾರಕ ಹಾಗೂ ದೇಶದ ಆರೋಗ್ಯ ವ್ಯವಸ್ಥೆಯನ್ನೇ ಹದಗೆಡಿಸಲಿದೆ ಎಂದರು.
ಹಿಂದೆ ಇದ್ದ ವ್ಯವಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಎಂಸಿಐಗೆ ಇತ್ತು. ಆದರೆ ಹೊಸ ಆಯೋಗ ಯಾವ ತಪಾಸಣೆಯೂ ಇಲ್ಲದೇ ನೇರವಾಗಿ ಅನುಮತಿ ನೀಡಬಹುದಾಗಿದೆ. ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
Related Articles
Advertisement
ಜನ ಸಾಮಾನ್ಯರಿಗೆ ಮಾರಕಆಯುರ್ವೇದ ವೈದ್ಯರಿಗೆ ಅಲ್ಪಾವಧಿ ತರಬೇತಿ ನೀಡಿ ಅಲೋಪತಿಕ್ ಔಷಧ ವಿತರಿಸಲು ಅವಕಾಶ ಮಾಡಿಕೊಡುವುದು ಒಂದೆಡೆ ಆಯುರ್ವೇದ ಪದ್ಧತಿಯನ್ನು ಮುಗಿಸುವ ಸಂಚು. ಇನ್ನೊಂದೆಡೆ ಅರೆಜ್ಞಾನದಿಂದ ಚಿಕಿತ್ಸೆ ನೀಡುವುದು ಜನಸಾಮಾನ್ಯರ ಪಾಲಿಗೆ ಮಾರಕವಾಗಲಿದೆ. ಇಂಥ ವೈದ್ಯರಿಂದ ನಮ್ಮ ಸಂಸದರು, ಸಚಿವರು ಚಿಕಿತ್ಸೆ ಪಡೆಯುತ್ತಾರೆಯೇ?
– ಡಾ| ಎಚ್.ಎನ್. ರವೀಂದ್ರ,
ಅಧ್ಯಕ್ಷ , ಭಾರತೀಯ ವೈದ್ಯಕೀಯ ಸಂಘದ
ಕರ್ನಾಟಕ ರಾಜ್ಯ ಘಟಕ