Advertisement
ಸೋಮವಾರ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಪ್ರತಾಪ್‌ಸಿಂಹ ನಾಯಕ್, ಡಾ| ತಳವಾರ ಸಾಬಣ್ಣ, ಎಸ್.ವಿ. ಸಂಕನೂರ ಗಮನಸೆಳೆಯುವ ಸೂಚನೆ ಅಡಿ ವಿಷಯ ಪ್ರಸ್ತಾವಿಸಿ, ರಾಜ್ಯದಲ್ಲಿ ಇತ್ತೀಚೆಗೆ ಕೊಲೆ, ಕೋಮುಗಲಭೆ, ಅತ್ಯಾಚಾರ, ಅಪರಾಧ ಕೃತ್ಯಗಳು ಹೆಚ್ಚಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಬಗ್ಗೆ ಈ ಘಟನೆಗಳೇ ಸಾಕ್ಷಿಯಾಗಿವೆ ಎಂದು ಆರೋಪಿಸಿದರು.
Related Articles
Advertisement
ಸಚಿವರ ಸಮರ್ಥನೆಇದಕ್ಕೆ ತಿರುಗೇಟು ನೀಡಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್, ಕೈಕಟ್ಟಿ ಹಾಕಲಾಗಿದೆ ಅಥವಾ ಕೈಚೆಲ್ಲಿದ್ದಾರೆ ಎಂಬ ಆರೋಪಗಳಲ್ಲಿ ಅರ್ಥವಿಲ್ಲ. ಮಂಗಳೂರು ಶಾಲೆಯೊಂದರ ಘಟನೆ ವಿಚಾರದಲ್ಲಿ ಶಾಸಕರಿಬ್ಬರು ನೀಡಿದ ಹೇಳಿಕೆಗಳ ವಿರುದ್ಧ ದೂರುಗಳು ಬಂದಿದ್ದವು. ಹಾಗಾಗಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಶಿಕ್ಷಕಿ ವಿರುದ್ಧ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ. ಹಾವೇರಿ ಪ್ರಕರಣದಲ್ಲಿ ವಿಳಂಬ ಮಾಡಿದ್ದಕ್ಕೆ ಮೂವರು ಪೊಲೀಸ್ ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ 19 ಜನರನ್ನು ಬಂಧಿಸಲಾಗಿದೆ. ಮಂಡ್ಯ ಹನುಮಧ್ವಜ ವಿಚಾರದಲ್ಲಿ ಅನುಮತಿ ಪಡೆದಿದ್ದು ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಕ್ಕೆ. ಆದರೆ ಹಾರಿಸಿದ್ದು ಹನುಮಧ್ವಜ. ಹಾಗಾಗಿ, ಕ್ರಮ ಕೈಗೊಳ್ಳಲಾಯಿತು ಎಂದು ಸ್ಪಷ್ಟಪಡಿಸಿದರು. ಶ್ರೀರಾಮ ನಮ್ಮವ ನೆನಪಿರಲಿ….
ಶ್ರೀರಾಮ ನಮ್ಮವನು. ಇದನ್ನು ನೀವು ಚೆನ್ನಾಗಿ ನೆನಪಿಟ್ಟು ಕೊಳ್ಳಿ. ರಾಮ ನಿಮಗೆ ಈಗ ನೆನಪಾಗಿದ್ದಾನೆ. ಆದರೆ ಚಿಕ್ಕವರಿದ್ದಾ ಗಿಂದ ರಾಮನ ಪಾನಕ, ಕೋಸಂಬರಿ ಹಂಚಿದವರು ನಾವು…’
– ರಾಮನನ್ನು ದೂಷಿಸಿದ ಶಿಕ್ಷಕಿ ವಿರುದ್ಧ ಯಾವುದೇ ಎಫ್ಐಆರ್ ಇಲ್ಲ. ಬದಲಿಗೆ ಅದನ್ನು ಖಂಡಿಸಿದವರ ವಿರುದ್ಧ ಎಫ್ಐಆರ್ ಹಾಕಲಾಗಿದೆ ಎಂದು ವಿಪಕ್ಷ ಬಿಜೆಪಿ ಸದಸ್ಯರ ಆರೋಪಕ್ಕೆ ಗೃಹ ಸಚಿವ ಡಾ| ಪರಮೇಶ್ವರ ನೀಡಿದ ತಿರುಗೇಟು ಇದು. ಶಾಸಕರ ವಿರುದ್ಧ ದೂರು ಬಂದಿದ್ದರಿಂದ ಎಫ್ಐಆರ್ ದಾಖಲಿಸಲಾಗಿದೆ ಅಂತ ಸಚಿವರ ಸಮರ್ಥನೆಗೆ ಖಾರವಾಗಿ ಪ್ರತಿಕ್ರಿಯಿಸಿದ ವಿಪಕ್ಷದ ಸದಸ್ಯರು, ಹಾಗಿದ್ದರೆ ರಾಮನನ್ನು ದೂಷಿಸಿದವರ ವಿರುದ್ಧ ಯಾವುದೇ ಎಫ್ಐಆರ್ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.