Advertisement
ರಾಜ್ಯಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಿನ್ನಿಗೋಳಿ ಮೂರು ಕಾವೇರಿಯ ಮಾರಿ ಗುಡಿಯಿಂದ ಕಾರ್ನಾಡ್ ಜಂಕ್ಷನ್ ತನಕ ಹೆದ್ದಾರಿಯ ಅಗಲವನ್ನು ಹಾಲಿ 5.5 ಮೀ.ಗಳಿಂದ 7 ಮೀಟರ್‌ಗೆ ವಿಸ್ತರಿಸಲಾಗುವುದು.
ಕಾರ್ನಾಡ್, ಎಸ್.ಕೋಡಿ ಜಂಕ್ಷನ್‌ನಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್ ಬೇ ನಿರ್ಮಾಣ ಮಾಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
Related Articles
Advertisement
180 ವಿದ್ಯುತ್ ಕಂಬ ತೆರವು, 60 ಮರಗಳಿಗೆ ಕೊಡಲಿ
ಮೂರು ಕಾವೇರಿಯಿಂದ ಕಾರ್ನಾಡ್ ತನಕ ರಸ್ತೆ ಅಂಚಿನಲ್ಲಿ ತಿರುವು ಪ್ರದೇಶದಲ್ಲಿದ್ದ 180ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ತೆರವು ಕಾರ್ಯ ಮೆಸ್ಕಾಂ ವತಿಯಿಂದ ನಡೆಯಲಿದೆ. 100ಕ್ಕೂ ಮಿಕ್ಕಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಸರ್ವೆ ನಡೆದಿದೆ. ಕೆಲವು ರಸ್ತೆಯ ಅಂಚಿನಲ್ಲಿದ್ದು, ಅಂತಹ 60 ಮರಗಳನ್ನು ಕಡಿಯಬೇಕಾಗಿದೆ. ಹೆಚ್ಚಿನ ಕಡೆಗಳಲ್ಲಿ ಸರಕಾರಿ ಜಾಗ ಇದೆ. ಕೆಲವು ಕಡೆಗಳಲ್ಲಿ ಖಾಸಗಿ ಜಾಗವಿದ್ದು, ಸಹಕಾರ ಕೋರಲಾಗಿದೆ. ಮೂರು ಕಾವೇರಿಯಲ್ಲಿ ತುಂಬಾ ಅಪಾಯಕಾರಿ ತಿರುವು ಇದ್ದು, ಅಲ್ಲಿ ಡಿವೈಡರ್ ನಿರ್ಮಿಸಿ, ಮುಂಡ್ಕೂರು ಕಡೆಗೆ ಹೋಗುವ ಬಸ್‌ಗಳಿಗೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೆದ್ದಾರಿ ಇಲಾಖೆಯ ಮೂಲ ತಿಳಿಸಿದೆ. ಕಿನ್ನಿಗೋಳಿ ಮುಖ್ಯ ಪೇಟೆಯು ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಿದ್ದು, ಮುಖ್ಯ ರಸ್ತೆಯ ಎರಡು ಬದಿಗಳನ್ನು ಎರಡೂ ಗ್ರಾಮ ಪಂಚಾಯತ್‌ಗಳು ಹಂಚಿಕೊಂಡಿವೆ. ಕಿನ್ನಿಗೋಳಿ ಮಾರುಕಟ್ಟೆ ಕಟ್ಟಡ ಶೀಘ್ರ ತೆರವು
ಕಿನ್ನಿಗೋಳಿ ಪೇಟೆಯ ಮಧ್ಯಭಾಗ ದಲ್ಲಿರುವ ಮಾರುಕಟ್ಟೆಯ ಕಟ್ಟಡದಿಂದ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟ್ ಚರಂಡಿ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಕಟ್ಟಡ ತೆರವುಗೊಳಿಸುವ ಬಗ್ಗೆ ಮಂಜೂರಾತಿಗಾಗಿ ತಾಲೂಕು ಪಂಚಾಯತ್‌ಗೆ ಪತ್ರ ಬರೆದಿದ್ದು, ಅಲ್ಲಿಂದ ಅನುಮೋದನೆ ಬಂದ ಕೂಡಲೇ ಹಳೆ ಕಟ್ಟಡ ತೆರವುಗೊಳಿಸಲಾಗುವುದು.
ಅರುಣ್ ಪ್ರದೀಪ್ ಡಿ’ಸೋಜಾ
ಕಿನ್ನಿಗೋಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಘುನಾಥ ಕಾಮತ್ ಕೆಂಚನಕೆರೆ