ಬೆಂಗಳೂರು : ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.2ರಷ್ಟು ಹಚ್ಚಿಸುವ ಮೂಲಕ ದಸರೆಯ ಸ್ವೀಟ್ ಗಿಫ್ಟ್ ನೀಡಿದ್ದಾರೆ.
ಇಂದು ಶುಕ್ರವಾರ ಸಂಜೆ ರಾಜ್ಯ ಸರಕಾರ ಈ ಸಂಬಂಧ ಆದೇಶವನ್ನು ಹೊರಡಿಸುವ ಮೂಲಕ ರಾಜ್ಯ ಸರಕಾರಿ ನೌಕರರನ್ನು ನಾಡ ಹಬ್ಬದ ಈ ಸಂದರ್ಭದಲ್ಲಿ ಸಂಪ್ರೀತಗೊಳಿಸಿತು.
ಹಣಕಾಸು ಸಚಿವರೂ ಆಗಿರುವ ಸಿಎಂ ಕುಮಾರ ಸ್ವಾಮಿ ಅವರು ರಾಜ್ಯ ಸರಕಾರಿ ನೌಕರರ ಮೂಲ ವೇತನವನ್ನು ಶೇ.1.75ರಿಂದ ಶೇ.3.75ಕ್ಕೆ ಏರಿಸಿದ್ದಾರೆ. ಕಳೆದ ಜುಲೈ 1ರಿಂದಲೇ ಅನ್ವಯವಾಗುವಂತೆ ಈ ಏರಿಕೆ ಜಾರಿಗೆ ಬರಲಿದೆ.
ರಾಜ್ಯ ಸರಕಾರ ನೌಕರರು ತಮ್ಮ ಮೂಲ ವೇತನವನ್ನು ಶೇ.4.25ರಷ್ಟು ಹೆಚ್ಚಿಸಲು ಮನವಿ ಸಲ್ಲಿಸಿದ್ದರು. ಆರೆ ಈ ವರ್ಷ ಜನವರಿ 1ರಿಂದಲೇ ಅನ್ವಯವಾಗವಂತೆ ಶೇ.1.75ರ ಹೆಚ್ಚಳ ಮಾಡಲಾಗಿತ್ತು. ಈಗ ಶೇ.2ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗಿದೆ. ಒಟ್ಟಂದದಲ್ಲಿ ಇದರ ಪರಿಣಾಮ ಶೇ.3.75 ಆಗಿದೆ.
ಹಿಂದೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಆರು ಲಕ್ಷ ಸರಕಾರಿ ನೌಕಕರಿಗೆ ಅನುಕೂಲವಾಗುವಂತೆ ಶೇ.2ರ ತುಟ್ಟಿ ಭತ್ಯೆಯನ್ನು ಹೆಚ್ಚಿಸಿತು.