Advertisement

ರಾಜ್ಯ ಸರಕಾರ ಸುಭದ್ರ: ಖಾದರ್‌

11:32 PM May 25, 2019 | Lakshmi GovindaRaj |

ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಬಿಜೆಪಿಯವರು ವರ್ಷದಿಂದ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದರೂ ಯಶಸ್ವಿಯಾಗಿಲ್ಲ. ಈಗಲೂ ಆಗಲ್ಲ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿ, ಅಪಪ್ರಚಾರ ಮಾಡಿ ಕಾಂಗ್ರೆಸ್‌- ಜೆಡಿಎಸ್‌ನ್ನು ಪ್ರತ್ಯೇಕಿಸುವ ಯತ್ನ ಫಲಿಸದು. ಎರಡೂ ಪಕ್ಷಗಳು ಒಗ್ಗಟ್ಟಿನಲ್ಲಿವೆ. ರಾಜ್ಯದ ಅಭಿವೃದ್ಧಿಗೆ ಜರಪರ ಕಾರ್ಯಕ್ರಮಗಳನ್ನು ನೀಡಿ 5 ವರ್ಷಗಳ ಆಡಳಿತವನ್ನು ಪೂರ್ತಿಗೊಳಿಸಲಿದೆ ಎಂದು ಹೇಳಿದರು.

ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಲಾಗುವುದು ಎಂದ ಸಚಿವರು, ನಳಿನ್‌ಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next