Advertisement

ಆಸ್ತಿ ನೋಂದಣಿ : ಮುದ್ರಾಂಕ ಶುಲ್ಕ ಇಳಿಕೆ

07:11 AM May 27, 2020 | Hari Prasad |

ಬೆಂಗಳೂರು: ಆಸ್ತಿ ನೋಂದಣಿಯನ್ನು ಉತ್ತೇಜಿಸಲು ರಾಜ್ಯ ಸರಕಾರವು ಮುದ್ರಾಂಕ ಶುಲ್ಕದಲ್ಲಿ ಇಳಿಕೆ ಮಾಡಿ ಆದೇಶ ಹೊರಡಿಸಿದೆ.

Advertisement

ಗರಿಷ್ಠ 20 ಲಕ್ಷ ರೂ. ಮೌಲ್ಯದವರೆಗೆ ಫ್ಲ್ಯಾಟ್‌ಗಳ ಮೊದಲ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 2 ಮತ್ತು 35 ಲಕ್ಷ ರೂ. ಮೌಲ್ಯದವರೆಗಿನ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ. 5ರಿಂದ 3ಕ್ಕೆ ಇಳಿಸಲು ಸರಕಾರ ನಿರ್ಧರಿಸಿದೆ.

ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಸೂಚನೆಯನ್ನು ನೀಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಮುದ್ರಾಂಕ, ನೋಂದಣಿ ಶುಲ್ಕ ಮೂಲದ ಆದಾಯದಲ್ಲಿ 3,542 ಕೋ.ರೂ. ಖೋತಾ ಆಗುವ ನಿರೀಕ್ಷೆ ಇದೆ. ಹೀಗಾಗಿ ಈ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next