Advertisement

ನಿದ್ರಾವಸ್ಥೆಯಲ್ಲಿ  ರಾಜ್ಯ ಸರಕಾರ: ಶ್ರೀನಿವಾಸ ಪೂಜಾರಿ

07:55 AM Aug 17, 2017 | Team Udayavani |

ಕುಂದಾಪುರ: ಜಿಲ್ಲೆಯಲ್ಲಿ ಮರಳು ಸಮಸ್ಯೆ, 94ಸಿ ಹಕ್ಕುಪತ್ರ ಹಾಗೂ ಪಡಿತರ ಚೀಟಿ ಮೊದಲಾದ ಅನೇಕ ಸಮಸ್ಯೆಗಳು ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದರೂ ರಾಜ್ಯದ ಕಾಂಗ್ರೆಸ್‌ ಸರಕಾರ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ನಿದ್ರಾವಸ್ಥೆಯಲ್ಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಬುಧವಾರ ಕುಂದಾಪುರ ವಿಧಾನಸಭಾ ಕ್ಷೇತ್ರದ ಗಡಿ ಭಾಗ ವಾದ ಮಾಬುಕಳ ದಿಂದ ಕುಂದಾಪುರದ ತನಕ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರ ನೇತೃತ್ವ ದಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ನಡೆಸಿದ ಕಾಲ್ನಡಿಗೆ ಜಾಥಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಿರಂತರ ಹೋರಾಟ
ಸರಕಾರದ ಈ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಹಾಗೂ ಇಂದು ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕಾಲ್ನಡಿಗೆ ಜಾಥಾವನ್ನು ಸಂಘಟಿಸಲಾಗಿದೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಜನರಿಗೋಸ್ಕರ ಬಿಜೆಪಿ ನಿರಂತರ ಹೋರಾಟಗಳನ್ನು ಸಂಘಟಿಸುತ್ತಲೇ ಇರುತ್ತದೆ  ಎಂದರು.

4 ವರ್ಷದಲ್ಲಿ ಸರಕಾರ 94ಸಿ ಹಾಗೂ 94ಸಿಸಿ ಅರ್ಜಿ ದಾರರಿಗೆ ನೀಡಬೇಕಾಗಿರುವ 12,800 ಹಕ್ಕುಪತ್ರಗಳಲ್ಲಿ ಕೇವಲ 1,500ನ್ನು ಮಾತ್ರ ನೀಡಲಾಗಿದೆ. ಡೀಮ್ಡ್ ಫಾರೆಸ್ಟ್‌ ಕಾರಣವನ್ನು ನೆಪವಾಗಿಟ್ಟು ಇತರರಿಗೆ ನೀಡದಿರುವುದು ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಹಿಂದೂ ಸಂಘಟನೆಯ ಸತ್ಯಜಿತ್‌, ಮಾಜಿ ಶಾಸಕ ಲಾಲಾಜಿ ಮೆಂಡನ್‌, ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಸಾರಂಗ, ಬಿಜೆಪಿ ಮುಖಂಡರಾದ ರಾಘವೇಂದ್ರ ಶೆಟ್ಟಿ ಬೇಳೂರು, ಕುಯಿಲಾಡಿ ಸುರೇಶ್‌ ನಾಯಕ್‌, ಕಿರಣ್‌ ಕುಮಾರ್‌, ರಾಘವೇಂದ್ರ ಕಾಂಚನ್‌ ಬಾರಿಕೆರೆ, ವಿಠಲ ಪೂಜಾರಿ, ಜಾನಕಿ ಬಿಲ್ಲವ ಉಪಸ್ಥಿತರಿದ್ದರು.

Advertisement

ಕಿಶೋರ್‌ ಕುಮಾರ್‌ ಪ್ರಸ್ತಾವನೆಗೈದರು. ರಾಜೇಶ್‌ ಕಾವೇರಿ ಕಾರ್ಯಕ್ರಮ ನಿರೂಪಿಸಿದರು.

ಮರಳು ನೀತಿ:ಚುನಾವಣೆ ಮೇಲೆ ಕಣ್ಣು
ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಮಾತ  ನಾಡಿ, ಕರಾವಳಿಗೆ ಏಕರೂಪದ ಮರಳು ನೀತಿ ಯನ್ನು ಜಾರಿಗೆ ತರುವ ಬಗ್ಗೆ ಈ ಹಿಂದೆಯೇ ಒತ್ತಾಯಗಳು ಕೇಳಿ ಬಂದಿ ದ್ದರೂ ಸರಕಾರ ಬದ ಲಾವಣೆ ಯನ್ನು ತರುವ ಮನಸ್ಸು ಮಾಡದೇ ಇರುವುದು ಇಂದು ಮರಳು ಸಮಸ್ಯೆ ಉಲ್ಬಣವಾಗಲು ಕಾರಣ ವಾಗಿದೆ. ಸರಕಾರ ಜನರ ಸಮಸ್ಯೆಗೆ ಸ್ಪಂದಿಸಿ ಎಂದೋ ಜಾರಿಗೆ ತರಬೇಕಾಗಿದ್ದ ಹೊಸ ಮರಳು ನೀತಿ ಯನ್ನು ಇಂದು ತಡವಾಗಿ ಜಾರಿಗೆ ತರಲು ಚಿಂತನೆ ನಡೆಸು ತ್ತಿರುವ ಉದ್ದೇಶದ ಹಿಂದೆ ಚುನಾ ವಣೆ ಪ್ರಮುಖ ಕಾರಣವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next