ದೇವನಹಳ್ಳಿ: ಸಿಎಂ ಯಡಿಯೂರಪ್ಪ ಮಂಡಿಸಿರುವ ಬಜೆಟ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಕೇಂದ್ರವನ್ನು ಘೋಷಿಸುತ್ತಾರೆಂಬುವ ಆಸೆಯಲ್ಲಿದ್ದ ಜನತೆಗೆ ಸರ್ಕಾರ ನಿರಾಸೆ ಮೂಡಿಸಿದೆ. ಜಿಲ್ಲೆಗೆ ಅನೇಕ ಯೋಜನೆಗಳನ್ನು ನೀಡಬೇಕಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಾವುದೇ ತಾಲೂಕಿಗೆ ಯೋಜನೆಗಳನ್ನು ನೀಡುವುದರಲ್ಲಿ ಬಜೆಟ್ ಹಿಂದುಳಿದಿದೆ.
ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿರುವುದು: ದೇವನಹಳ್ಳಿಯಲ್ಲಿ ಸಾರ್ವ ಜನಿಕ ಖಾಸಗಿ ಸಹಭಾಗಿತ್ವದಲ್ಲಿ ಫುಟ್‌ಬಾಲ್, ಹಾಕಿ, ಶೂಟಿಂಗ್, ಈಜು, ಟೆನ್ನಿಸ್ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ಒದಗಿಸಲು ಕ್ರಮವಹಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ದಿಂದ ಬೆಂಗಳೂರು ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್ ನಿರ್ಮಿಸಲು ಪ್ರಸ್ತಾಪಿಸಿದ್ದು, ಈ ಯೋಜನೆಯ ಟ್ರಂಕ್ ಮೂಲ ಸೌಕರ್ಯವನ್ನು 168 ಕೋಟಿ ರೂ.ಗಳ ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ
2ನೇ ರನ್‌ವೇ ಕಾಮಗಾರಿಯು 2,708 ಕೋಟಿ ರೂ.ಗಳ ವೆಚ್ಚದಲ್ಲಿಪೂರ್ಣಗೊಳಿಸಿ, 2ನೇ ಟರ್ಮಿನಲ್ ಕಟ್ಟಡ ಕಾಮಗಾರಿಯನ್ನು 4,751ಕೋಟಿ ರೂ.ವೆಚ್ಚದಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. ಎತ್ತಿನಹೊಳೆ ಸಮಗ್ರ ಯೋಜನೆಗೆ ಭೈರಗೊಂಡಲು ಜಲಾಶಯದ ನಿರ್ಮಾಣಕ್ಕೆ ಅಡ್ಡಿಯಾಗಿರುವ ಭೂಸ್ವಾಧೀನ ಸಮಸ್ಯೆ ನಿವಾರಿಸಿ ಕಾಮಗಾರಿಗೆ ಆದ್ಯತೆ ನೀಡಲಾಗುವುದು. ಬೆಂಗಳೂರು ನಗರ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308ಎಂಎಲ್‌ಡಿ ನೀರನ್ನು ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಯ 234 ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ 500 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ. ಕಾರ್ಮಿಕರ ಸುಸಜ್ಜಿತವಾದ ತಾತ್ಕಾಲಿಕ ವಸತಿ ನಿರ್ಮಾಣಕ್ಕೆ ಆದ್ಯತೆಯನ್ನು ಬಜೆಟ್‌ನಲ್ಲಿ ನೀಡಲಾಗಿದೆ.
ನಿರಾಸೆ ಮೂಡಿಸಿದ ಬಜೆಟ್: ಈ ಬಾರಿ ಬಜೆಟ್‌ನಲ್ಲಿ ಜಿಲ್ಲಾ ಕೇಂದ್ರದ ಘೋಷಣೆ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು, ಸರ್ಕಾರಿ ಎಂಜನಿಯರಿಂಗ್ ಕಾಲೇಜು, ದೇವನಹಳ್ಳಿ ಮತ್ತು ವಿಜಯಪುರ ಅವಳಿ ನಗರಗಳಾಗಿ ಅಭಿವೃದ್ಧಿ ಪಡಿಸುವುದು. ಜಿಲ್ಲಾ ಕ್ರೀಡಾಂಗಣ,ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿರುವ ಕಾವೇರಿನೀರು ನಗರಕ್ಕೆ ವಿಸ್ತರಣೆ, ಮೆಟ್ರೋ ರೈಲು, ದ್ರಾಕ್ಷಿ ಹಣ್ಣಿನಸಂಸ್ಕರಣಾ ಘಟಕ ಸೇರಿದಂತೆ ಯಾವುದೇ ಯೋಜನೆಗಳಿಗೂಅನುದಾನ ಘೋಷಣೆಯಾಗಿಲ್ಲ, ಎತ್ತಿನಹೊಳೆ ಯೋಜನೆಯಿಂದ ಯಾವಾಗ ನೀರು ಬರುವುದು ಎಂಬುವ ಕನಸಿನಲ್ಲಿ ಜನರು ಇದ್ದಾರೆ. ಕಾಮಗಾರಿ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿ 1500 ಅಡಿ ಕೊರೆಸಿದರೂಕೊಳವೆ ಬಾವಿಗಳಲ್ಲಿ ನೀರು ಬರದ ಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ನೀರಾವರಿಗೆ ಹೆಚ್ಚಿನ ಅನುದಾನ ನೀಡುತ್ತಾರೆಂಬುವ ಜನಪ್ರತಿನಿಧಿಗಳು ಮತ್ತು ಜನರಿಗೆಈ ಬಾರಿಯು ಸರ್ಕಾರ ನಿರಾಶಾದಾಯಕ ಬಜೆಟ್ ಮಂಡಿಸಿದ್ದಾರೆ.
ಬೆಂ.ಗ್ರಾ ಜಿಲ್ಲೆಗೆ ರಾಜ್ಯ ಬಜೆಟ್‌ನಲ್ಲಿ ಸಾಕಷ್ಟುಅನುದಾನದ ನಿರೀಕ್ಷೆ ಹುಸಿಯಾಗಿದೆ. ಏತ ನೀರಾವರಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತದೆ ಎಂಬುವ ಆಶಾ ಭಾವನೆಯಲ್ಲಿದ್ದೆವು. ಎಸ್‌ಟಿಆರ್‌ಆರ್‌ಯೋಜನೆಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿತ್ತು. ಪಿಆರ್ ಆರ್ ರಸ್ತೆಗಳಿಗೆ ಹೆಚ್ಚಿನ ಒತ್ತನ್ನು ನೀಡಿದೆ.
–ಶರತ್ ಬಚ್ಚೇಗೌಡ, ಶಾಸಕ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನಪ್ರದೇಶ ಅಭಿವೃದ್ಧಿಗೆ ಬಜೆಟ್‌ನಲ್ಲಿಹೆಚ್ಚಿನ ಒತ್ತನ್ನು ನೀಡಿದರೆ ಹೇಗೆ,ದೇವನಹಳ್ಳಿ ಸುತ್ತಮುತ್ತಲು ಅನೇಕ ಬಡ ಜನರು, ರೈತರು, ಕೂಲಿಕಾರ್ಮಿಕರು, ಅಲ್ಪಸಂಖ್ಯಾತರುಸಾಕಷ್ಟು ಇದ್ದರೂ ಸರ್ಕಾರ ಬಜೆಟ್‌ನಲ್ಲಿ ಅವರಿಗೆ ಅನುಕೂಲವಾಗುವ ಯೋಜನೆ ರೂಪಿಸುವಲ್ಲಿ ವಿಫಲವಾಗಿದೆ.
–ಎಲ್.ಎನ್.ನಾರಾಯಣಸ್ವಾಮಿ, ಶಾಸಕ